ಆಟಗಾರರಿಗೆ ಬಿಗ್ ಶಾಕ್: ವೇತನ ತಡೆ ಹಿಡಿಯಲು ಫ್ರಾಂಚೈಸಿಗಳ ಮಾಸ್ಟರ್ ಪ್ಲ್ಯಾನ್!

ಮಾರ್ಚ್ 18, 2025 - 20:57
 0  15
ಆಟಗಾರರಿಗೆ ಬಿಗ್ ಶಾಕ್: ವೇತನ ತಡೆ ಹಿಡಿಯಲು ಫ್ರಾಂಚೈಸಿಗಳ ಮಾಸ್ಟರ್ ಪ್ಲ್ಯಾನ್!

IPL 2025ರಲ್ಲಿ ಆಟವಾಡುತ್ತಿರುವ ಕೆಲ ಕ್ರಿಕೆಟಿಗರಿಗೆ ವೇತನ ತಡೆ ಹಿಡಿಯಲು ಫ್ರಾಂಚೈಸಿಗಳು ಮಾಸ್ಟರ್ ಪ್ಲ್ಯಾನ್ ಮಾಡಿದೆ. 

ಹಲವು ಪ್ರಾಂಚೈಸಿ ಆಟಗಾರರು, ಗಾಯಗೊಂಡಿರುವ ಕೆಲ ಆಟಗಾರರು ಚಿಕಿತ್ಸೆ ಪಡೆಯುತ್ತಿದ್ದು, ಹೀಗಾಗಿ ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಪಟ್ಟಿಯಲ್ಲಿ ಜಸ್​ಪ್ರೀತ್ ಬುಮ್ರಾ, ಮಯಾಂಕ್ ಯಾದವ್ ಸೇರಿದಂತೆ ಅನೇಕ ಆಟಗಾರರಿದ್ದಾರೆ. ಇನ್ನು ವೈಯುಕ್ತಿಕ ಕಾರಣಗಳಿಂದಾಗಿ ಕೆಎಲ್ ರಾಹುಲ್, ಅಝ್ಮತ್​ತುಲ್ಲಾ ಒಮರ್​ಝಾಹಿ ಸೇರಿದಂತೆ ಕೆಲ ಆಟಗಾರರು ಆರಂಭಿಕ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತ ಮೊದಲಾರ್ಧದಕ್ಕೆ ಅನೇಕ ಆಟಗಾರರು ಅಲಭ್ಯರಾಗಿರುವುದರಿಂದ ಇದೀಗ ಫ್ರಾಂಚೈಸಿಗಳು ವೇತನ ಪಾವತಿಗೂ ಸೂತ್ರಗಳನ್ನು ಕಂಡುಕೊಂಡಿದೆ. ಅಂದರೆ ಆಟಗಾರರ ಗಾಯದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೆಲ ಫ್ರಾಂಚೈಸಿಗಳು 15-65-20 ಸೂತ್ರದೊಂದಿಗೆ ವೇತನ ಪಾವತಿಸಲು ಮುಂದಾಗಿದೆ.

ಇಲ್ಲಿ ಆಟಗಾರನು ಐಪಿಎಲ್​ಗೆ ಆಗಮಿಸುತ್ತಿದ್ದಂತೆ ಒಟ್ಟು ವೇತನದಿಂದ 15% ನೀಡಲಾಗುತ್ತಿದೆ. ಇನ್ನು ಮೊದಲಾರ್ಧದಲ್ಲಿ ಸಂಪೂರ್ಣ ಕಾಣಿಸಿಕೊಂಡ ಬಳಿಕ ಉಳಿದ 65% ವೇತನ ಪಾವತಿಸಲಿದ್ದಾರೆ. ಅಲ್ಲದೆ ಐಪಿಎಲ್ ಮುಗಿದ ಬಳಿಕ ಇನ್ನುಳಿದ 20% ವೇತನ ಪಾವತಿಸಲು ನಿರ್ಧರಿಸಲಾಗಿದೆ.

ಉದಾಹರಣೆಗೆ- 11 ಕೋಟಿ ರೂ.ಗೆ ಖರೀದಿಸಲಾಗಿರುವ ಮಯಾಂಕ್ ಯಾದವ್​ಗೆ ಲಕ್ನೋ ಸೂಪರ್ ಜೈಂಟ್ಸ್ ಆರಂಭದಲ್ಲಿ 1.65 ಕೋಟಿ ರೂ. ನೀಡಲಿದೆ. ಮೊದಲಾರ್ಧದ ಟೂರ್ನಿ ಮುಕ್ತಾಯದ ಬಳಿಕ 7.15 ಕೋಟಿ ರೂ. ನೀಡಲಿದ್ದಾರೆ. ಹಾಗೆಯೇ ದ್ವಿತೀಯಾರ್ಧದ ಪಂದ್ಯಗಳ ಬಳಿಕ 2.2 ಕೋಟಿ ರೂ. ಪಾವತಿಸಲಿದ್ದಾರೆ. ಇದೇ ಸೂತ್ರದೊಂದಿಗೆ ವೇತನ ಪಾವತಿಸಲು ಫ್ರಾಂಚೈಸಿಗಳು ಪ್ಲ್ಯಾನ್ ರೂಪಿಸಿದ್ದಾರೆ

ಹಿಂದೆ ಬಹುತೇಕ ಫ್ರಾಂಚೈಸಿಗಳು ಮೊದಲಾರ್ಧಕ್ಕೂ ಮುನ್ನ 50% ಹಾಗೂ ದ್ವಿತೀಯಾರ್ಧದ ವೇಳೆ 50% ವೇತನ ಪಾವತಿಸುತ್ತಿದ್ದರು. ಇದರಿಂದ ಗಾಯಗೊಂಡ ಆಟಗಾರರು ಕೆಲ ಪಂದ್ಯಗಳಿಗೆ ಅಲಭ್ಯರಾದರೂ ಸಂಪೂರ್ಣ ವೇತನ ಪಡೆದುಕೊಳ್ಳುತ್ತಿದ್ದರು.

ಇದೀಗ ಈ ಸಮಸ್ಯೆಗೆ ಬ್ರೇಕ್ ಹಾಕಲು ಕೆಲ ಫ್ರಾಂಚೈಸಿಗಳು 15-65-20 ಸೂತ್ರವನ್ನು ಪರಿಚಯಿಸಿದೆ. ಈ ಮೂಲಕ ತಂಡದ ಜೊತೆಗಿರುವ ಆಟಗಾರರಿಗೆ ಮಾತ್ರ ವೇತನ ಪಾವತಿಸಲು ಪ್ಲ್ಯಾನ್ ರೂಪಿಸಿದ್ದಾರೆ. ಇದಾಗ್ಯೂ ಈ ವೇತನ ಪ್ರಕ್ರಿಯೆಯ ಸೂತ್ರವು ಆಯಾ ಫ್ರಾಂಚೈಸಿಗಳಿಗೆ ಬಿಟ್ಟದ್ದು ಎಂದು ಬಿಸಿಸಿಐ ಕೂಡ ಸ್ಪಷ್ಟಪಡಿಸಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow