ಆರೆಂಜ್ ಕ್ಯಾಪ್ ರೇಸ್ನಲ್ಲಿ ಕಿಂಗ್ ಕೊಹ್ಲಿ!? ಎಷ್ಟನೇ ಸ್ಥಾನ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

ಐಪಿಎಲ್ 2025ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ನೀಡುತ್ತಿದೆ. ಅದರಂತೆ ಈ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ಅವರು, ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ.
ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್ಗೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಗುಜರಾತ್ ಟೈಟಾನ್ಸ್‌ನ ಸಾಯಿ ಸುದರ್ಶನ್ ಮತ್ತೊಮ್ಮೆ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ನಿನ್ನೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಅವರು 52 ರನ್‌ಗಳನ್ನು ಬಾರಿಸಿ ಮತ್ತೊಮ್ಮೆ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ.
ಕೋಲ್ಕತ್ತಾ-ಗುಜರಾತ್ ಪಂದ್ಯಕ್ಕೂ ಮೊದಲು ಸುದರ್ಶನ್ 365 ರನ್ ಗಳಿಸಿದ್ದರು. ಕೆಕೆಆರ್ ವಿರುದ್ಧದ 4 ರನ್ ಗಳಿಸಿದ ಬೆನ್ನಲ್ಲೇ, 18ನೇ ಆವೃತ್ತಿಯ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪೂರನ್ ದಾಖಲೆಯನ್ನು ಹಿಂದಿಕ್ಕಿದರು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸಾಯಿ ಸುದರ್ಶನ್ 36 ಎಸೆತಗಳಲ್ಲಿ 52 ರನ್ ಗಳಿಸಿದರು. ಪ್ರಸಕ್ತ ಋತುವಿನಲ್ಲಿ ಅವರು ಒಟ್ಟು 417 ರನ್ಗಳಿಸಿದ್ದಾರೆ. ನಿಕೋಲಸ್ ಪೂರನ್ 49 ರನ್ಗಳ ಹಿನ್ನಡೆ ಅನುಭವಿಸಿದ್ದಾರೆ
ಯಾರೆಲ್ಲ ರೇಸ್ನಲ್ಲಿದ್ದಾರೆ..?
ಸಾಯಿ ಸುದರ್ಶನ್ (GT) – 417 ರನ್‌ಗಳು
ನಿಕೋಲಸ್ ಪೂರನ್ (LSG) – 368 ರನ್
ಸೂರ್ಯಕುಮಾರ್ ಯಾದವ್ (MI) – 333 ರನ್
ಜೋಸ್ ಬಟ್ಲರ್ (GT) – 327 ರನ್‌ಗಳು
ವಿರಾಟ್ ಕೊಹ್ಲಿ (RCB) – 322 ರನ್‌ಗಳು.
ನಿಮ್ಮ ಪ್ರತಿಕ್ರಿಯೆ ಏನು?






