“ಆ ಯೋಗ್ಯತೆ ಯಾರಿಗೂ ಇಲ್ಲ” – ಯಶ್ ತಾಯಿ ಪುಷ್ಪಮ್ಮನ ಹೇಳಿಕೆಗೆ ದೀಪಿಕಾ ದಾಸ್ ತಿರುಗೇಟು

ಆಗಸ್ಟ್ 23, 2025 - 20:07
 0  21
“ಆ ಯೋಗ್ಯತೆ ಯಾರಿಗೂ ಇಲ್ಲ” – ಯಶ್ ತಾಯಿ ಪುಷ್ಪಮ್ಮನ ಹೇಳಿಕೆಗೆ ದೀಪಿಕಾ ದಾಸ್ ತಿರುಗೇಟು

ಕೆಜಿಎಫ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ *“ಕೊತ್ತಲವಾಡಿ”*ಗೆ ಸಂಬಂಧಿಸಿದ ಹೇಳಿಕೆಗಳು ಇದೀಗ ವಿವಾದಕ್ಕೆ ಕಾರಣವಾಗಿವೆ.

ಚಿತ್ರದ ಪ್ರಚಾರದ ವೇಳೆ, ಪತ್ರಕರ್ತರು ನಟಿ ದೀಪಿಕಾ ದಾಸ್ ಕುರಿತು ಪ್ರಶ್ನಿಸಿದಾಗ ಪುಷ್ಪ ಅರುಣ್ ಕುಮಾರ್, “ದೀಪಿಕಾ ದಾಸ್ ಯಾವ ದೊಡ್ಡ ಹೀರೋಯಿನ್? ಯಾವ ಸಿನಿಮಾದಲ್ಲಿ ಸಾಧನೆ ಮಾಡಿದ್ದಾಳೆ? ಅವಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಸಂಬಂಧಿಕರಾದರೂ ದೂರವೇ ಇಡುತ್ತೇವೆ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.

ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ನಡುವೆ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟಿಸಿದೆ. ಕೆಲವರು ಇದನ್ನು ಕುಟುಂಬದ ಮನಸ್ತಾಪಕ್ಕೆ ಸಂಬಂಧಿಸಿದಂತೆ ಕೊಂಡಾಡಿದರೆ, ಇನ್ನಿತರರು ಪುಷ್ಪಮ್ಮನ ಹೇಳಿಕೆಯನ್ನು ಟ್ರೋಲ್ ಮಾಡಿದ್ದಾರೆ.

ಇದೀಗ ನಟಿ ದೀಪಿಕಾ ದಾಸ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ನೀಡಿದ್ದಾರೆ. “ಹೊಸ ಕಲಾವಿದರನ್ನು ಬೆಳೆಸುವವರು ಮೊದಲು ಕಲಾವಿದರಿಗೆ ಬೆಲೆ ಕೊಡಲು ಕಲಿಯಬೇಕು. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರೂ, ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ – ಅದು ಅಮ್ಮ ಆಗಿರಲಿ, ದೊಡ್ಡಮ್ಮ ಆಗಿರಲಿ. ನಮ್ಮ ಇಂಡಸ್ಟ್ರಿಯ ಸ್ಟಾರ್‌ಗೆ ಗೌರವ ಇದೆ, ಆದರೆ ನನಗೂ ಸ್ವಾಭಿಮಾನವಿದೆ” ಎಂದು ದೀಪಿಕಾ ಕಿಡಿಕಾರಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow