ಸಿನಿಮಾ ಇಂಡಸ್ಟ್ರಿಗೆ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಪತ್ನಿ ಎಂಟ್ರಿ! ಹಿರೋ ಯಾರು!?

ಮಾಜಿ ಆರ್‌ಸಿಬಿ ಸ್ಟಾರ್ ಯಜುವೇಂದ್ರ ಚಹಾಲ್ ಪತ್ನಿ ಧನಶ್ರೀ ಸಿನಿ ರಂಗ ಪ್ರವೇಶ ಮಾಡಿದ್ದಾರೆ. ಸೋಶಿಲ್ ಮೀಡಿಯಾ ಸ್ಟಾರ್ ಆಗಿರುವ ಅವರು, ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ತೆಲುಗು ಚಿತ್ರರಂಗದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ನೃತ್ಯವನ್ನೇ ಪ್ರಧಾನವಾಗಿಟ್ಟುಕೊಂಡು ತಯಾರಾಗುತ್ತಿರುವ Akasham Dati Vastava ಸಿನಿಮಾಗೆ ನಾಯಕಿಯಾಗಿದ್ದಾರೆ. ಖ್ಯಾತ ಡ್ಯಾನ್ಸ್ ಮಾಸ್ಟರ್ ಯಶ್ ನಾಯಕರಾಗಿ ನಟಿಸುತ್ತಿದ್ದಾರೆ. ದಿಲ್ ರಾಜು ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಹರ್ಷಿತ್ ರೆಡ್ಡಿ ಮತ್ತು ಹನ್ಸಿತಾ ರೆಡ್ಡಿ ಚಿತ್ರ ನಿರ್ಮಿಸ್ತಿದ್ದಾರೆ. ಶಶಿಕುಮಾರ್ ಮುತ್ತುಲೂರಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.
ಈ ಚಿತ್ರದ ಕೆಲವು ಭಾಗಗಳನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ. ಉಳಿದ ದೃಶ್ಯಗಳ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯಲಿದೆ. ಚಿತ್ರದಲ್ಲಿ ಧನಶ್ರೀ ಜೊತೆಗೆ ಮತ್ತೊಬ್ಬ ನಾಯಕಿ ನಟಿ ನಟಿಸಲಿದ್ದಾರೆ. ಸೀರತ್ ಕಪೂರ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






