ರಶ್ಮಿಕಾ ಜೊತೆ ಡೇಟಿಂಗ್! ಸ್ಪಷ್ಟನೆ ಕೊಟ್ಟ ವಿಜಯ್​ ದೇವರಕೊಂಡ!

ನವೆಂಬರ್ 23, 2024 - 21:30
 0  15
ರಶ್ಮಿಕಾ ಜೊತೆ ಡೇಟಿಂಗ್! ಸ್ಪಷ್ಟನೆ ಕೊಟ್ಟ ವಿಜಯ್​ ದೇವರಕೊಂಡ!

ರಶ್ಮಿಕಾ ಜೊತೆ ಡೇಟಿಂಗ್ ಮಾಡುತ್ತಿರುವ ವದಂತಿ ಬಗ್ಗೆ ವಿಜಯ್​ ದೇವರಕೊಂಡ ಸ್ಪಷ್ಟನೆ  ಕೊಟ್ಟಿದ್ದಾರೆ. ಈ ಹಿಂದೆ ರಶ್ಮಿಕಾ ಹಾಗೂ ದೇವರ ಕೊಂಡ  ಈ ಇಬ್ಬರು ಡೇಟಿಂಗ್​​ ಮಾಡುತ್ತಿದ್ದಾರೆ. ಇವರು ಜೊತೆಯಾಗಿ ವಿದೇಶದಲ್ಲಿ ತಿರುಗಾಡಿದ್ದಾರೆ ಎಂಬ ವಿಚಾರ ಸೋಷಿಯಲ್​ ಮಿಡಿಯಾದಲ್ಲಿ ಹರಿದಾಡುತ್ತಿರುವುದು ಹೊಸತೇನಲ್ಲ.

ದೀಪಾವಳಿ ಹಬ್ಬವನ್ನು ರಶ್ಮಿಕಾ ದೇವರಕೊಂಡ ಜೊತೆ ಆಚರಿಸಿಕೊಂಡಿದ್ದರು ಎನ್ನಲಾಗಿತ್ತು. ಆದರೆ ಇದೀಗ ಡೇಟಿಂಗ್​​ ಮೀಟಿಂಗ್​ ನಡುವೆ ಖುದ್ದು ವಿಜಯ್​ ದೇವರಕೊಂಡ ಅವರೇ ಈ ವಿಚಾರದ ಬಗ್ಗೆ ಮಾತಾಡಿದ್ದಾರೆ. ತಾನು ಡೇಟಿಂಗ್​ನಲ್ಲಿರೋದನ್ನು ಅವರು ಒಪ್ಪಿಕೊಂಡಿದ್ದಾರೆ. ಆದ್ರೆ ಹುಡುಗಿ ಯಾರು ಎಂಬುದನ್ನು ವಿಜಯ್ ದೇವರಕೊಂಡ ಬಿಟ್ಟುಕೊಟ್ಟಿಲ್ಲ. 

ಇನ್ನೂ, ಕರ್ಲಿ ಟೇಲ್ಸ್ ಜೊತೆ ಮಾತನಾಡ್ತಾ, ಯಾರಾದ್ರೂ ನಿಮ್ಮನ್ನು ಪ್ರೀತಿ ಮಾಡಿದ್ರೆ ನಿಮಗೆ ಹೇಗೆ ಅನ್ನಿಸುತ್ತೆ ಎಂಬುದು ನನ್ನ ಅನುಭವಕ್ಕೆ ಬಂದಿದೆ. ಹಾಗೆಯೇ ಯಾರನ್ನಾದ್ರೂ ನೀವು ಪ್ರೀತಿ ಮಾಡಿದ್ರೆ ಹೇಗಾಗುತ್ತೆ ಎಂಬುದೂ ನನಗೆ ಗೊತ್ತು ಎಂದಿದ್ದಾರೆ. ನಾನು ಕಂಡಿಷನ್​ಗಾಗಿ ಪ್ರೀತಿ ಮಾಡುವುದಿಲ್ಲ. ಏಕೆಂದರೆ ನನ್ನ ಪ್ರೀತಿಯು ನಿರೀಕ್ಷೆಯಿಂದ ಬರುತ್ತೆ. ನನಗೆ ಈಗ 35 ವರ್ಷ. ನಾನು ಈ ಡೇಟ್‌ಗಾಗಿ ಹೊರಗೆ ಎಲ್ಲೂ ಹೋಗುವುದಿಲ್ಲ. ನನ್ನ ಒಬ್ಬ ಸಹ ನಟಿಯಯೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಇನ್ನು, ಇದೇ ಮಾತನ್ನು ಕೇಳಿದ ಅಭಿಮಾನಿಗಳು ಆ ಲಕ್ಕಿ ಗರ್ಲ್​ ಯಾರು ಅಂತ ತಿಳಿದುಕೊಳ್ಳು ತುಂಬಾ ಉತ್ಸುಕರಾಗಿದ್ದಾರೆ. ಆದರೆ ಇನ್ನೂ ಕೇಲವರು ಅದು ಪಕ್ಕಾ ರಶ್ಮಿಕಾನೇ ಅಂತ ಹೇಳುತ್ತಿದ್ದಾರೆ. ಇದಕ್ಕೆ ಕಾರಣ, ದೀಪಾವಳಿ ಹಬ್ಬದ  ದೇವರಕೊಂಡ ಮನೆಯಲ್ಲಿ ತೆಗೆದ ಫೋಟೋ ಫೋಸ್ಟ್ ಮಾಡಿದ್ದ ರಶ್ಮಿಕಾ, ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡಗೆ ಫೋಟೋ ಕ್ರೆಡಿಟ್ ನೀಡಿದ್ದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow