BBK11: ಬೀಪ್ ಪದ ಬಳಕೆ: ರಜತ್ ಗೆ ಕಿಚ್ಚನ ಫುಲ್ ಕ್ಲಾಸ್!

ರಜತ್ ಅವರು ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದಾರೆ. ಅವರು ಬಂದ ವಾರವೇ ಅಶ್ಲೀಲ ಪದ ಬಳಕೆ ಮಾಡಿ ಎಲ್ಲರ ಕೋಪಕ್ಕೆ ಕಾರಣ ಆಗಿದ್ದಾರೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಇದೇ ವಿಚಾರವಾಗಿ ನಿನ್ನೆ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಅವರು, ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡರು.
ಈ ವಾರ ನಡೆದ ಟಾಸ್ಕ್ನಲ್ಲಿ ರಜತ್ ತೀರಾ ಅಗ್ರೆಸ್ಸಿವ್ ಆಗಿ ಆಡಿದ್ದು, ಆಟಗಾರ ಸುರೇಶ್ ಅವರ ಬಗ್ಗೆ ಅವಾಚ್ಯ ಶಬ್ದ ಬಳಸಿದ್ದಾರೆ. ಈ ಹಿಂದೆ ಲಾಯರ್ ಜಗದೀಶ್ ಅವಾಚ್ಯ ಶಬ್ದಗಳನ್ನು ಬಳಸಿ ಮನೆಯಿಂದ ಹೊರಗೆ ಹೋಗಿದ್ದಾರೆ. ಆದರೆ ಈಗ ಮತ್ತೆ ಮನೆಯಲ್ಲಿ ಅವಾಚ್ಯ ಶಬ್ದಗಳು ಕೇಳಿ ಬಂದಿವೆ. ಇದೇ ಕಾರಣಕ್ಕೆ ರಜತ್ಗೆ ಕಳಪೆ ನೀಡಿ ಜೈಲಿಗೆ ಸಹ ಅಟ್ಟಲಾಗಿತ್ತು.
ಶನಿವಾರದ ಎಪಿಸೋಡ್ನಲ್ಲಿ ವಾರದ ಪಂಚಾಯಿತಿ ನಡೆಸಿಕೊಟ್ಟ ಸುದೀಪ್, ಸುರೇಶ್ ವಿರುದ್ಧ ಅವಾಚ್ಯ ಶಬ್ದ ಬಳಸಿದ ರಜತ್ಗೆ ಸಣ್ಣದಾಗಿ ಕ್ಲಾಸ್ ತೆಗೆದುಕೊಂಡರು. ಕನ್ನಡದಲ್ಲಿ ಹಲವಾರು ಮಾತುಗಳಿವೆ ಆದರೆ ಆ ಮಾತುಗಳನ್ನು ಏಕೆ ಬಳಸಿದಿರಿ ಎಂದು ಪ್ರಶ್ನೆ ಮಾಡಿದ ಸುದೀಪ್, ಅಂದು ಬಳಸಿದ ಮಾತುಗಳನ್ನು ಈಗ ಇಲ್ಲಿ ನನ್ನ ಎದುರು ಬಳಸಿ ನೋಡೋಣ’ ಎಂದು ಸವಾಲು ಹಾಕಿದರು. ‘ಕೋಪದಲ್ಲಿದ್ದಾಗ ಇದೇ ಭಾಷೆ ಬಳಸುವೆ ಅನ್ನುತ್ತೀರಿ, ಈ ಮನೆಯಲ್ಲಿ ಕೋಪ ಬರುವ ಸನ್ನಿವೇಶ ಸಾಕಷ್ಟು ಬರುತ್ತವೆ, ಆಗೆಲ್ಲ ಹೀಗೆಯೇ ಮಾತನಾಡುತ್ತೀರಾ’ ಎಂದರು.
ಅಂದು ಕೋಪದಲ್ಲಿ ಮಾತನಾಡಿದೆ ಮತ್ತೆ ಮಾತನಾಡುವುದಿಲ್ಲ’ ಎಂದು ರಜತ್ ಕ್ಷಮೆ ಕೇಳಿದರಾದರೂ, ಯಾರೇ ಆಗಲಿ ಸೋಲುತ್ತೀರಿ, ಗೆಲ್ಲುತ್ತೀರಿ, ಬಹಳ ಕಷ್ಟಪಟ್ಟು ಆಡುತ್ತಿದ್ದೀರಿ ಆದರೆ ಅವಾಚ್ಯ ಶಬ್ದ ಬಳಸಿ, ಜಗಳ ಮಾಡಿ, ಕೈ ಮಾಡಿ ಇಂಥಹಾ ಸಿಲ್ಲಿ ಕಾರಣಗಳಿಗೆ, ನಿಮ್ಮ ಗುಂಡಿಯನ್ನು ನೀವೇ ತೋಡಿಕೊಂಡು ಮನೆಯಿಂದ ಹೊರಗೆ ಹೋಗಬೇಡಿ’ ಎಂದು ಸುದೀಪ್ ಎಲ್ಲರಿಗೂ ಬುದ್ಧಿವಾದ ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?






