ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​: 3 ವರ್ಷ ವಯೋಮಿತಿ ಸಡಿಲಿಕೆ ಮಾಡಿ ಸರ್ಕಾರ ಆದೇಶ

ಸೆಪ್ಟೆಂಬರ್ 30, 2025 - 21:15
 0  11
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​: 3 ವರ್ಷ ವಯೋಮಿತಿ ಸಡಿಲಿಕೆ ಮಾಡಿ ಸರ್ಕಾರ ಆದೇಶ

ಬೆಂಗಳೂರು: ರಾಜ್ಯದ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಶುಭ ಸುದ್ದಿ ನೀಡಿದೆ. ರಾಜ್ಯ ಸರ್ಕಾರದ ನೇಮಕಾತಿಗಳಲ್ಲಿ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ಆಗುವವರೆಗೂ ರಾಜ್ಯದ ಸಿವಿಲ್‌ ಸೇವೆಗಳಲ್ಲಿ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲಾಗಿರಲಿಲ್ಲ. ಜೊತೆಗೆ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಯೂ ಬಾಕಿ ಉಳಿಯಿತ್ತು.

ಅದರಂತೆ, 2024ರ ಅಕ್ಟೋಬರ್‌ 28ರಿಂದ ಮುಂದಿನ ಆದೇಶದವರೆಗೆ ಯಾವುದೇ ಹೊಸ ಅಧಿಸೂಚನೆಯನ್ನು ಹೊರಡಿಸಬಾರದು ಎಂದು ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಸರ್ಕಾರದ ಯಾವುದೇ ನೇಮಕಾತಿ ನಡೆದಿರಲಿಲ್ಲ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್ ನೀಡಿದ್ದು ಎಲ್ಲ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಒಂದು ಬಾರಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿದೆ. ಹೀಗಾಗಿ ಎಲ್ಲ ಅಭ್ಯರ್ಥಿಗಳು ಸರ್ಕಾರದ ಉದ್ಯೋಗಗಳಿಗೆ ಅರ್ಜಿಗಳನ್ನು ಅಲ್ಲಿಕೆ ಮಾಡಬಹುದು.

ಧಾರವಾಡದಲ್ಲಿ ವಿದ್ಯಾರ್ಥಿಗಳು ಕಳೆದ ವಾರ ಬೃಹತ್‌ ಪ್ರತಿಭಟನೆ ಮಾಡಿ ವಯೋಮಿತಿ ಸಡಿಲಿಕೆ ಮಾಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದರು. ಸರ್ಕಾರ ಹಲವು ವರ್ಷಗಳಿಂದ ನೇಮಕ ಮಾಡದ ಕಾರಣ ಅಭ್ಯರ್ಥಿಗಳ ವಯಸ್ಸು ಹೆಚ್ಚಾಗಿರುತ್ತದೆ. ವಯಸ್ಸು ಹೆಚ್ಚಾದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಬರೆಯಲು ಸಾಧ್ಯವಿಲ್ಲ. ಇದನ್ನು ಮನಗಂಡಿರುವ ಸರ್ಕಾರ ಉದ್ಯೋಗ ಸಂಬಂಧ ನಡೆಸುವ ಎಲ್ಲಾ ಪರೀಕ್ಷೆಗಳಲ್ಲಿ ವಯೋಮಿತಿ ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ. 

ವಯೋಮಿತಿ ಸಡಿಲಿಕೆ ಎಷ್ಟು?

  1.  ಸಾಮಾನ್ಯ ವರ್ಗ – 35 ವರ್ಷದಿಂದ 38 ವರ್ಷ
  2.  ಒಬಿಸಿ – 38 ವರ್ಷದಿಂದ 41 ವರ್ಷ
  3.  ಎಸ್‌ಸಿ/ಎಸ್‌ಟಿ/ಪ್ರವರ್ಗ-1 – 40 ವರ್ಷದಿಂದ 43 ವರ್ಷ

ಶಿಕ್ಷಕರ ನೇಮಕಾತಿ

  • SC/ST/OBC 42 ಇತ್ತು, 45 ಆಗುತ್ತೆ
  • ಸಾಮಾನ್ಯ – 40 ಇತ್ತು, 43 ಆಗುತ್ತೆ

SDA/FDA/ಗ್ರೂಪ್ ಸಿ ಹುದ್ದೆ

  • SC/ST/OBC – 35 ಇತ್ತು, 38 ಆಗುತ್ತೆ
  • ಸಾಮಾನ್ಯ – 37 ಇತ್ತು, 40 ಆಗುತ್ತೆ

ಪೊಲೀಸ್ ಕಾನ್ಸ್​ ಟೇಬಲ್ ನೇಮಕಾತಿ

  • SC/ST/OBC – 27 ಇತ್ತು, 30 ಆಗುತ್ತೆ
  • ಸಾಮಾನ್ಯ – 25 ಇತ್ತು, 28 ಆಗುತ್ತೆ

ಪೊಲೀಸ್ ಸಭ್ ಇನ್ಸ್​ ಪೆಕ್ಟರ್​

  • SC/ST/OBC – 32 ಇತ್ತು, 35 ಆಗುತ್ತೆ
  • ಸಾಮಾನ್ಯ – 30 ಇತ್ತು, 33 ಆಗುತ್ತೆ

ಕೆಎಎಸ್

  • SC/ST/OBC 40 ಇತ್ತು, 43 ಆಗುತ್ತೆ
  • ಸಾಮಾನ್ಯ 37 ಇತ್ತು, 40 ಆಗುತ್ತೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow