ಜೀ ವೇದಿಕೆಯಲ್ಲಿ ಕಣ್ಣೀರು ಹಾಕಿದ ಕಿಚ್ಚ: ತುಂಬು ವೇದಿಕೆಯಲ್ಲಿ ಭಾವುಕರಾಗಿದ್ದೇಕೆ ಸುದೀಪ್?

ಸರಿಗಮಪ ವೇದಿಕೆಗೆ ಸ್ಯಾಂಡಲ್‌ವುಡ್‌ನ ಬಾದ್‌ಷಾ, ಕಿಚ್ಚ ಸುದೀಪ್ ಅವರ ಆಗಮಿಸಿದ್ದು, ಸರಿಗಮಪ ವೇದಿಕೆಯಲ್ಲಿ 'Max'imum ಮನರಂಜನೆಯ ಹಬ್ಬ! ಸಂಭ್ರಮದಿಂದ ನಡೆದಿದೆ. ಕಿಚ್ಚ ಸುದೀಪ್ ಸದ್ಯ ಮ್ಯಾಕ್ಸ್ ಗೆಲುವಿನ ಸಂಭ್ರಮದಲ್ಲಿದ್ದಾರೆ. ಮೊದಲ ವಾರ ಭರ್ಜರಿ ಕಮಾಯಿ ಮಾಡಿರೋ ಮ್ಯಾಕ್ಸ್ ಈಗಲೂ ಯಶಸ್ವಿ ಪ್ರದರ್ಶನ ಕಾಣ್ತಾ ಇದೆ. ಸಿನಿಮಾಗೆ ರಿಪೀಟ್ ಆಡಿಯನ್ಸ್ ಬರ್ತಾ ಇದ್ದು, ಕಿಚ್ಚ ಫುಲ್ ಖುಷ್ ಆಗಿದ್ದಾರೆ. ಇನ್ನೂ ಈ ವಾರದ ಸರಿಗಮಪ ಶೋನಲ್ಲಿ ಸುದೀಪ್ ಭಾಗಿಯಾಗಿದ್ದಾರೆ.
ಕಿಚ್ಚ ಸುದೀಪ್ ಅಂದ್ರೆ ಸ್ಟೈಲ್, ಕ್ಯೂಟ್ ಸ್ಮೈಲ್ ನೆನಪಾಗುತ್ತೆ. ತರ್ಲೆ, ತಮಾಷೆ ಜೊತೆಗೆ ಆ ಕಾಫಿ ಕಪ್ ಹಿಡಿದು ಕೊಡೋ ಲುಕ್ ಇದಿಯಲ್ಲ ನೋಡುಗರ ಮನಸೂರೆಗೊಳಿಸುತ್ತೆ.
ಜೀ ಕನ್ನಡ ವಾಹಿನಿಯ ಸರಿಗಮಪ ಈ ಸ್ಟೈಲ್ ಕಿಂಗ್ನ ಸೈಲೆಂಟ್ ಮಾಡಿದೆ. ಪ್ರೀತಿ, ವಾತ್ಸಲ್ಯ ತುಂಬಿದ್ದ ಕಾರ್ಯಕ್ರಮದಲ್ಲಿ ಕಿಚ್ಚ ಕಣ್ಣೀರಾಕಿದ್ದಾರೆ. ಪ್ರೀತಿಯ ಅಮ್ಮನನ್ನ ಕಳೆದುಕೊಂಡಾಗ ಸುದೀಪ್ ಅವ್ರನ್ನ ನೋಡಿ ಇಡೀ ಕರುನಾಡೇ ಕಣ್ಣೀರಿಟ್ಟಿತ್ತು. ಅಮ್ಮನ ಮೂರ್ತಿಯನ್ನ ಉಡುಗೊರೆಯಾಗಿ ನೀಡೋ ಮೂಲಕ ಸುದೀಪ್ ಅವರಿಗೆ ಎಂದೂ ಮರೆಯಲಾಗದ ಕ್ಷಣವನ್ನ ಕಟ್ಟಿಕೊಟ್ಟಿದೆ ಸರಿಗಮಪ ವೇದಿಕೆ.
ಸರಿಗಮಪ ಮಹಾವೇದಿಕೆಯಲ್ಲಿ ಸರ್ಪ್ರೈಸ್ ಇಲ್ಲಿಗೆ ಮುಗಿಲಿಲ್ಲ. ಸುದೀಪ್ ಮಗಳು ಸಾನ್ವಿ ಅಪ್ಪನಂತೆ ಬಹುಮುಖ ಪ್ರತಿಭೆ, ಒಳ್ಳೆ ಗಾಯಕಿ. ಅಪ್ಪನಿಗಾಗಿ ಸಾನ್ವಿ ಸುದೀಪ್ ಬ್ಯೂಟಿಫುಲ್ ಸಾಂಗ್ ಹಾಡೋ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಸಾನ್ವಿ ಅವರನ್ನ ನೋಡಿ ಕಿಚ್ಚ ಹೆಮ್ಮೆಯಿಂದ ಮಗಳ ಬಗ್ಗೆ ಮಾತನಾಡಿದ್ದಾರೆ.
ಈ ವೀಕೆಂಡ್ ಸರಿಗಮಪ ಮಾಕ್ಸಿಮಮ್ ಕಲರ್ಫುಲ್ ಆಗಿರಲಿದ್ದು, ಕಿಚ್ಚ ಸುದೀಪ್ ಅವರ ಕುಟುಂಬದ ಸಿಹಿ-ಸವಿ ಕ್ಷಣಗಳನ್ನ ಕಣ್ತುಂಬಿಕೊಳ್ಳೋ ಅವಕಾಶ ವೀಕ್ಷಕರಿಗೆ ಸಿಗಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






