ಇನ್ಫೋಸಿಸ್ ಮೇಲೆ ₹32,000 ಕೋಟಿ ಜಿಎಸ್‌ಟಿ ಬಾಕಿ ಆರೋಪ, ರಿಯಾಯಿತಿ ನೀಡಲ್ಲ ಎಂದ ಕೇಂದ್ರ!

ಬೆಂಗಳೂರು ಮೂಲದ ಐಟಿ ಕಂಪನಿಗೆ ₹32,000 ಕೋಟಿ ಜಿಎಸ್‌ಟಿ ನೋಟಿಸ್.
ಯೂಟರ್ನ್ ಹೊಡೆದ ಕೇಂದ್ರ, ಇನ್ಫೋಸಿಸ್‌ಗಿಲ್ಲ ಟ್ಯಾಕ್ಸ್ ರಿಯಾಯಿತಿ.
10 ದಿನಗಳಲ್ಲಿ ವಿವರಣೆ ಕೊಡಬೇಕಿದೆ ದೈತ್ಯ ಮಾಹಿತಿ ತಂತ್ರಜ್ಞಾನ ಕಂಪನಿ.
ಇನ್ಫೋಸಿಸ್ ಪಾವತಿಸಬೇಕಾದ 32,000 ಕೋಟಿ ರೂ. ಜಿಎಸ್‌ಟಿ ಬಾಕಿ ವಿಷಯದಲ್ಲಿ ಯಾವುದೇ ರಿಯಾಯಿತಿ ಇಲ್ಲ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ. ವಿದೇಶಿ ಘಟಕಗಳಲ್ಲಿನ ತನ್ನ ವ್ಯವಹಾರ ಸಂಬಂಧ ಇನ್ಫೋಸಿಸ್ ಜಿಎಸ್‌ಟಿ ಬಾಕಿ ಉಳಿಸಿಕೊಂಡಿದೆ ಎಂದು ದೂರಲಾಗಿತ್ತು. ಈ ಬಗ್ಗೆ ಜಿಎಸ್‌ಟಿ ಕರ್ನಾಟಕ ವಿಭಾಗ ನೋಟಿಸ್ ನೀಡಿ, ನಂತರ ತನಿಖೆಯ ಹೊಣೆಯನ್ನು ಜಿಎಸ್‌ಟಿ ಕೇಂದ್ರ ವಿಭಾಗಕ್ಕೆ ವರ್ಗಾಯಿಸಿತ್ತು.
ತೆರಿಗೆ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಇನ್ಫೋಸಿಸ್ ಕಂಪನಿಯು ಜಿಎಸ್‌ಟಿ ನೋಟಿಸ್‌ಗೆ ಉತ್ತರಿಸಲು 10 ದಿನ ಕಾಲಾವಕಾಶ ಕೋರಿದೆ," ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಅಧಿಕಾರಿಗಳು ಹೇಳಿದ್ದಾರೆ.
ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಷೇರು ಮಾರುಕಟ್ಟೆಯಲ್ಲಿಇನ್ಫೋಸಿಸ್ ಷೇರು ಬೆಲೆ ಮಂಗಳವಾರ ಶೇ. 1.2ರಷ್ಟು ಕುಸಿದಿದೆ. ದಿನದ ಆರಂಭದಲ್ಲಿ ಕಂಪನಿಯ ಷೇರುಗಳ ಬೆಲೆ ಶೇ 1.6ರಷ್ಟು ಬೆಳವಣಿಗೆ ಕಂಡಿತ್ತು. ನಂತರ ಇಳಿಕೆ ಕಂಡಿತ್ತು.
ಬ್ಯುರೊ ರಿಪೋರ್ಟ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






