ಎಕ್ಸ್’ಪ್ರೆಸ್’ವೇನಲ್ಲಿ ಭೀಕರ ಅಪಘಾತ: ಕಾರು ಲಾರಿಗೆ ಡಿಕ್ಕಿ - ಆರು ಮಂದಿ ದುರ್ಮರಣ

ಜುಲೈ 19, 2025 - 12:08
 0  21
ಎಕ್ಸ್’ಪ್ರೆಸ್’ವೇನಲ್ಲಿ ಭೀಕರ ಅಪಘಾತ: ಕಾರು ಲಾರಿಗೆ ಡಿಕ್ಕಿ - ಆರು ಮಂದಿ ದುರ್ಮರಣ

ಲಕ್ನೋಮಥುರಾ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಯಮುನಾ ಎಕ್ಸ್ಪ್ರೆಸ್ವೇನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ದುರ್ಘಟನೆ ದೆಹಲಿಆಗ್ರಾ ಮಾರ್ಗದ ಐತಿಹಾಸಿಕ ಹೆದ್ದಾರಿಯಲ್ಲಿ ನಡವಳಿದಿದ್ದು, ದೇಹಗಳು ತುಂಬಾ ಹಾನಿಗೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಮೃತರನ್ನು ಹರ್ಲಾಲ್ಪುರ ಗ್ರಾಮದ ನಿವಾಸಿ ಧರ್ಮವೀರ್ ಸಿಂಗ್, ಅವರ ಮಕ್ಕಳಾದ ರೋಹಿತ್ ಮತ್ತು ಆರ್ಯನ್, ರೋಹಿತ್ ಸ್ನೇಹಿತ, ದಲ್ವೀರ್ ಹಾಗೂ ಅವರ ಸಹೋದರ ಪರಾಸ್ ಸಿಂಗ್ ತೋಮರ್ ಎಂದು ಗುರುತಿಸಲಾಗಿದೆ.

ಇಂದು ಬೆಳಿಗ್ಗೆ ಅವಘಡ ಸಂಭವಿಸಿದೆ. ಇಕೋ ಕಾರಲ್ಲಿ ಧರ್ಮವೀರ್ ಸಿಂಗ್ ದೆಹಲಿಯಿಂದ ಆಗ್ರಾಕ್ಕೆ ತೆರಳುತ್ತಿದ್ದರು. ವೇಳೆ ಮುಂದೆ ಹೋಗುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಆರು ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 10 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow