ಏಷ್ಯಾಕಪ್ʼನಲ್ಲಿ ಭರ್ಜರಿ ಪ್ರದರ್ಶನ ಫಲವಾಗಿ ಅಭಿಷೇಕ್ ಶರ್ಮಾಗೆ ಸಿಕ್ಕ ಕಾರು ಭಾರತಕ್ಕೆ ತರುವಂತಿಲ್ಲ..!
2025ರ ಏಷ್ಯಾಕಪ್ ನಲ್ಲಿ ಟೀಮ್ ಇಂಡಿಯಾ ಪರ ಅಭಿಷೇಕ್ ಶರ್ಮಾಗೆ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. 7 ಇನಿಂಗ್ಸ್ಗಳಲ್ಲಿ ಆರಂಭಿಕನಾಗಿ ಬ್ಯಾಟ್ ಬೀಸಿದ್ದ ಅಭಿ 314 ರನ್ ಗಳಿಸುವ ಮೂಲಕ ಮಿಂಚಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದಿದ್ದರು. ಆದರೀಗ ಈ ಐಷಾರಾಮಿ ಕಾರನ್ನು ಭಾರತಕ್ಕೆ ತರಲು ಬಿಕ್ಕಟ್ಟು ಎದುರಾಗಿದೆ.
ಹೌದು, ಅಭಿಷೇಕ್ ಶರ್ಮಾಗೆ ಸಿಕ್ಕ HAVAL H9 SUV ಕಾರನ್ನು ಭಾರತಕ್ಕೆ ತರಲು ಕಾನೂನಿನ ತೊಡಕು ಉಂಟಾಗಿದೆ. ಇದಕ್ಕೆ ಮುಖ್ಯ ಕಾರಣ ಭಾರತೀಯ ರಸ್ತೆ ನಿಯಮ. ಅಂದರೆ ಭಾರತದಲ್ಲಿ ಬಲಗೈ ಡ್ರೈವ್ ವಾಹನಗಳನ್ನು ಮಾತ್ರ ಓಡಿಸಲು ಅನುಮತಿಸಲಾಗಿದೆ
ಅತ್ತ ಅಭಿಷೇಕ್ ಶರ್ಮಾಗೆ ಸಿಕ್ಕಿರುವುದು ಎಡಗೈ ಡ್ರೈವ್ ಕಾರ್. ಹವಾಲ್ H9 SUV ಕಾರಿನ ಸ್ಟೇರಿಂಗ್ ಎಡ ಭಾಗದಲ್ಲಿದೆ. ಹೀಗಾಗಿ ಈ ಕಾರನ್ನು ಭಾರತದಲ್ಲಿ ನೋಂದಾಯಿಸಲು ಹಾಗೂ ಓಡಿಸಲು ಅವಕಾಶವಿಲ್ಲ. ಇದೇ ಕಾರಣದಿಂದಾಗಿ ಅಭಿಷೇಕ್ ಶರ್ಮಾ ಇನ್ನೂ ಸಹ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಕಾರನ್ನು ಭಾರತಕ್ಕೆ ತಂದಿಲ್ಲ ಎಂದು ತಿಳಿದು ಬಂದಿದೆ.
ಇದಾಗ್ಯೂ GWM ಕಂಪೆನಿಯು ನವೆಂಬರ್ 2025 ರ ವೇಳೆಗೆ ಭಾರತದಲ್ಲಿ ಬಲಗೈ ಡ್ರೈವ್ ಆವೃತ್ತಿಯಲ್ಲಿ HAVAL SUV ಅನ್ನು ಬಿಡುಗಡೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ಈ ವೇಳೆ ಅಭಿಷೇಕ್ ಶರ್ಮಾ ಅವರಿಗೆ ಭಾರತದಲ್ಲಿ ಬಳಸಬಹುದಾದ ಹೊಸ ಮಾದರಿಯ ಬಲಗೈ ಡ್ರೈವ್ ಹವಾಲ್ H9 SUV ಕಾರ್ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಹೀಗಾಗಿ ಏಷ್ಯಾಕಪ್ನಲ್ಲಿ ಗೆದ್ದಂತಹ ಕಾರನ್ನು ಪಡೆಯಲು ಅಭಿಷೇಕ್ ಶರ್ಮಾ ಇನ್ನೊಂದಷ್ಟು ದಿನಗಳವರೆಗೆ ಕಾಯಲೇಬೇಕಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?