ಕತ್ತರಿಸಿದ ಸೇಬು ಹಣ್ಣು ಕಂದು ಬಣ್ಣಕ್ಕೆ ತಿರುಗುವುದು ಏಕೆ? - ನೀವು ತಿಳಿಯಲೇಬೇಕಾದ ವಿಚಾರ!

ಆಗಸ್ಟ್ 7, 2025 - 07:27
 0  12
ಕತ್ತರಿಸಿದ ಸೇಬು ಹಣ್ಣು ಕಂದು ಬಣ್ಣಕ್ಕೆ ತಿರುಗುವುದು ಏಕೆ? - ನೀವು ತಿಳಿಯಲೇಬೇಕಾದ ವಿಚಾರ!

ಹಣ್ಣುಗಳು ಕತ್ತರಿಸದೇ ಇದ್ದಾಗಲೇ ಹೆಚ್ಚು ಹೊತ್ತು ತಾಜಾತನವನ್ನು ಉಳಿಸಿಕೊಳ್ಳುತ್ತವೆ. ಆದರೆ ಕತ್ತರಿಸಿದ ಬಳಿಕ ಇದರ ಗಾಳಿಗೆ ಒಡ್ಡಿರುವ ಬಿಳಿಭಾಗ ಕಂದು ಅಥವಾ ಗಾಢ ವರ್ಣಕ್ಕೆ ತಿರುಗುತ್ತದೆ. ಈ ಭಾಗವನ್ನು ತೆಳುವಾಗಿ ಕೊಂಚ ಕತ್ತರಿಸಿದರೆ ಒಳಗಿನ ಉಳಿದ ಭಾಗ ತಾಜಾ ಆಗಿಯೇ ಇರುತ್ತದೆ. ಕೇವಲ ಗಾಳಿಗೆ ಒಡ್ಡಿರುವ ಭಾಗ ಮಾತ್ರ ಬಣ್ಣಗೆಡಲು ಹಣ್ಣಿನಲ್ಲಿರುವ ಕೆಲವು ರಾಸಾಯನಿಕಗಳು ಗಾಳಿಗೆ ಒಡ್ಡಿಕೊಂಡಾಗ ಪರಿವರ್ತನೆಗೆ ಒಳಗಾಗುವುದೇ ಕಾರಣ.

ಉದಾಹರಣೆಗೆ ಸೇಬು ಹಣ್ಣಿನ ತಿರುಳಿನ ಕೋಶಗಳಲ್ಲಿ ಆಮ್ಲಜನಕವಿದ್ದಾಗ, ಕ್ಲೋರೊಪ್ಲಾಸ್ಟ್‌ಗಳಲ್ಲಿನ ಪಾರದರ್ಶಕ ಪಾಲಿಫಿನಾಲ್ ಆಕ್ಸಿಡೇಸ್ (ಪಿಪಿಒ) ಕಿಣ್ವಗಳು ಫಿನಾಲಿಕ್ ಸಂಯುಕ್ತಗಳನ್ನು ಶೀಘ್ರವಾಗಿ ಆಮ್ಲಜನೀಕರಣ ಅಥವಾ ಆಕ್ಸಿಡೈಸ್ ಮಾಡಿ ಓ ಕ್ವಿನೋಲ್ ಎಂಬ ಸಂಯುಕ್ತಗಳಾಗಿ ಪರಿವರ್ತಿಸುತ್ತವೆ.

ಪ್ರತಿದಿನ ಒಂದು ಸೇಬನ್ನು ತಿಂದರೆ ನಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ. ಮತ್ತು ವೈದ್ಯರ ಬಳಿ ಹೋಗುವ ಅಗತ್ಯವಿರುವುದಿಲ್ಲ. ಆದ್ರೆ, ಸಾಕಷ್ಟು ಬಾರಿ ನೀವೆಲ್ಲಾ ಗಮನಿಸಿರುತ್ತೇವೆ. ಸೇಬನ್ನು ಕಟ್​ ಮಾಡಿದ ಕೆಲವೇ ಹೊತ್ತಲ್ಲಿ ಅದು ಕಂದು ಬಣ್ಣಕ್ಕೆ ತಿರುಗುತ್ತದೆ. ಅದು ಏಕೆ ಗೊತ್ತಾ? ಹಾಗಾದ್ರೆ ನೀವು ಕಂಪ್ಲೀಟ್​ ಈ ಸ್ಟೋರಿಯನ್ನು ಓದಲೇಬೇಕು.

ಸೇಬು ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗಿದೆ. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಎ, ಕ್ಯಾಲ್ಸಿಯಂ, ಕಬ್ಬಿಣ, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಮ್ಯಾಂಗನೀಸ್ ಇವೆ. ಅಂತಹ ಪರಿಸ್ಥಿತಿಯಲ್ಲಿ, ದಿನಕ್ಕೆ ಒಂದು ಸೇಬು ತಿನ್ನುವುದರಿಂದ, ನಿಮ್ಮ ದೇಹವನ್ನು ಅನೇಕ ರೋಗಗಳಿಂದ ದೂರವಿಡಬಹುದು. ಆದರೆ, ಸೇಬನ್ನು ಕತ್ತರಿಸಿ ತಕ್ಷಣ ತಿನ್ನಬೇಕು. ಏಕೆಂದರೆ ಸೇಬನ್ನು ಕತ್ತರಿಸಿದ ಸ್ವಲ್ಪ ಸಮಯದ ನಂತರ ಅದು ಕಂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಹೆಚ್ಚಿನ ಜನರಿಗೆ ಇದು ತಿಳಿದಿದೆ, ಆದರೆ ಸೇಬು ಏಕೆ ಬಣ್ಣ ಬದಲಾಯಿಸುತ್ತದೆ ಮತ್ತು ಅದು ಏಕೆ ಕಂದು ಬಣ್ಣಕ್ಕೆ ತಿರುಗಲು ಎಂದು ನಿಮಗೆ ಗೊತ್ತಿದೆಯೇ?

ಗೊತ್ತಿಲ್ಲವೆಂದರೆ ಈಗಲೇ ಈ ವಿಚಾರವನ್ನು ತಿಳಿದುಕೊಳ್ಳಿ. ಸೇಬನ್ನು ಕತ್ತರಿಸಿದ ನಂತರ, ಅದು ಕಂದು ಬಣ್ಣಕ್ಕೆ ತಿರುಗುತ್ತದೆ. ಏಕೆಂದರೆ ಸೇಬಿನಲ್ಲಿರುವ ಪಾಲಿಫಿನಾಲ್‌ ಆಕ್ಸಿಡೇಸ್  ಎಂಬ ಕಿಣ್ವವು ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ಪ್ರತಿಕ್ರಿಯಿಸುತ್ತದೆ. ಸಾಮಾನ್ಯವಾಗಿ ಸೇಬನ್ನು ಕತ್ತರಿಸಿದಾಗ, ಅದರ ಜೀವಕೋಶಗಳು ಒಡೆಯುತ್ತವೆ ಮತ್ತು PPO ಕಿಣ್ವವು ಗಾಳಿಯೊಂದಿಗೆ ಪ್ರತಿಕ್ರಿಯಿಸುತ್ತದೆ. ಈ ಕ್ರಿಯೆಯು PPO ಅನ್ನು ಆಕ್ಸಿಡೀಕರಿಸುತ್ತದೆ ಮತ್ತು ಮೆಲನಿನ್ ಎಂಬ ಕಂದು ರಾಸಾಯನಿಕವನ್ನು ರೂಪಿಸುತ್ತದೆ. ಇದರಿಂದಾಗಿ ಸೇಬುಗಳನ್ನು ಕತ್ತರಿಸಿದ ಸ್ವಲ್ಪ ಸಮಯದ ನಂತರ ಕಂಡು ಬಣ್ಣಕ್ಕೆ ತಿರುಗುತ್ತದೆ.

ಇನ್ನು, ಸೇಬುಗಳು ಕಂದು ಬಣ್ಣಕ್ಕೆ ತಿರುಗುವುದನ್ನು ತಡೆಯಲು, ನೀವು ಅವುಗಳ ಮೇಲೆ ನಿಂಬೆ ರಸವನ್ನು ಹಚ್ಚಬಹುದು. ಇದಲ್ಲದೆ, ನೀವು ಅವುಗಳನ್ನು ಉಪ್ಪು ನೀರಿನಲ್ಲಿ ಅಥವಾ ತಣ್ಣನೆಯ ನೀರಿನಲ್ಲಿ ನೆನೆಸಬಹುದು. ಇಷ್ಟು ಮಾತ್ರವಲ್ಲದೆ, ಕತ್ತರಿಸಿದ ತಕ್ಷಣ ಗಾಳಿಯಾಡದ ಪಾತ್ರೆಯಲ್ಲಿ ಮುಚ್ಚಿಡುವ ಮೂಲಕ ನೀವು ಅದನ್ನು ಕಂದು ಬಣ್ಣಕ್ಕೆ ತಿರುಗದಂತೆ ಉಳಿಸಬಹುದು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow