Samantha Ruth Prabhu: ದಕ್ಷಿಣ ಭಾರತದ ತ ನಟಿ ಸಮಂತಾ ರುತ್ ಪ್ರಭು ಒಟ್ಟು ಆಸ್ತಿ ಎಷ್ಟಿದೆ..? ಇಲ್ಲಿದೆ ವಿವರ

ಮೇ 4, 2025 - 20:08
 0  13
Samantha Ruth Prabhu: ದಕ್ಷಿಣ ಭಾರತದ ತ ನಟಿ ಸಮಂತಾ ರುತ್ ಪ್ರಭು ಒಟ್ಟು ಆಸ್ತಿ ಎಷ್ಟಿದೆ..? ಇಲ್ಲಿದೆ ವಿವರ

ನಟಿ ಸಮಂತಾ ರುತ್ ಪ್ರಭು ಅವರು ಡಿವೋರ್ಸ್ ನಂತರ ಕೆರಿಯರ್ನಲ್ಲಿ ತುಂಬಾ ಆ್ಯಕ್ಟಿವ್ ಆದರು. ಬೇರೆ ಯಾವುದೇ ವಿಚಾರದ ಬಗ್ಗೆ ಗಮನ ಹರಿಸದೆ ಸಮಂತಾ ಅವರು ತಮ್ಮ ಆರೋಗ್ಯ ಹಾಗೂ ಸಿನಿಮಾಗಳ ಬಗ್ಗೆ ಮಾತ್ರ ಗಮನ ನೀಡಲು ಶುರು ಮಾಡಿದ್ದರು. ಆದರೆ ಅವರ ಶಕುಂತಲಾ, ಯಶೋದ, ಖುಷಿ ಸಿನಿಮಾ ಏನೂ ದೊಡ್ಡ ಹಿಟ್ ಎನಿಸಿಕೊಳ್ಳಲಿಲ್ಲ. ಆದರೆ ಸಮಂತಾ ಸತತ ಸೋಲುಗಳಿಂದ ಕಂಗೆಡಲಿಲ್ಲ

ಇನ್ನೂ ಸಮಂತಾ ರುತ್ ಪ್ರಭು ಅವರು 101 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅವರು ಪ್ರತಿ ವರ್ಷ ಬ್ರ್ಯಾಂಡ್​ಗಳ ಪ್ರಚಾರದಿಂದ 8 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. ಅವರು ವಿಚ್ಛೇನದ ಬಳಿಕ ಪತಿಯಿಂದ ಅವರು ಯಾವುದೇ ಜೀವನಾಂಶ ಪಡೆದುಕೊಂಡಿಲ್ಲ.

ಸಮಂತಾ ಪ್ರಭು ಹಲವು ಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ‘ಓ ಬೇಬಿ’, ‘ಖುಷಿ’, ‘ಈಗ’ ರೀತಿಯ ಸಿನಿಮಾಗಳಲ್ಲಿ ಭಿನ್ನ ಪಾತ್ರ ಮಾಡಿದ್ದಾರೆ. ‘ರಂಗಸ್ಥಳಂ’, ‘ಜಾನು’, ‘ಯಶೋಧ’ ರೀತಿಯ ಸಿನಿಮಾಗಳನ್ನು ಮಾಡಿದ್ದರೆ. ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್ 2’ ಸರಣಿಯಲ್ಲಿ ಮಾಡಿ ಗಮನ ಸೆಳೆದಿದ್ದಾರೆ.

ಸಮಂತಾ ಅವರು ‘ರಕ್ತ ಬ್ರಹ್ಮಾಂಡ’ ಹೆಸರಿನ ವೆಬ್ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಆದಿತ್ಯ ರಾಯ್ ಕಪೂರ್, ವಮಿಕಾ ಗಬ್ಬಿ ಮೊದಲಾದವರು ನಟಿಸಿದ್ದು, ರಾಜ್ ಮತ್ತು ಡಿಕೆ ಇದನ್ನು ನಿರ್ದೇಶಿಸುತ್ತಿದ್ದಾರೆ. ಈ ಸರಣಿ ಮೇಲೆ ನಿರೀಕ್ಷೆ ಇದೆ. ಸಮಂತಾ ಅವರು ‘ಮಾ ಇಂಟಿ ಬಂಗಾರಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅವರು ನಿರ್ಮಾಪಕಿ ಕೂಡ ಹೌದು.

ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡೋದಾದರೆ ಅವರು ನಾಗ ಚೈತನ್ಯ ಜೊತೆ ವಿಚ್ಛೇದನ ಪಡೆದರು. ಈಗ ಅವರು ನಿರ್ದೇಶಕ ರಾಜ್ ಜೊತ್ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಅವರನ್ನೇ ವಿವಾಹ ಆದರೂ ಅಚ್ಚರಿ ಏನಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಅವರು ಸಾಕಷ್ಟು ಬಾರಿ ಸುತ್ತಾಟ ಮಾಡಿರೋದು ಕಂಡು ಬಂದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow