Sreeleela: 'ಭರಾಟೆ' ಬ್ಯೂಟಿಗೆ ಸ್ಟಾರ್ ಹೀರೋ ಜೊತೆ ನಟಿಸೋ ಆಫರ್: ಬಾಲಿವುಡ್ʼಗೆ ಹಾರಿದ ಶ್ರೀಲೀಲಾ!

ಟಾಲಿವುಡ್ ಟಾಪ್ ನಟಿಯರಲ್ಲಿ ಶ್ರೀ ಲೀಲಾ ಕೂಡ ಒಬ್ಬರು. ಇಂಡಸ್ಟ್ರಿಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಈ ಚೆಲುವೆ ಒಳ್ಳೆಯ ಮನ್ನಣೆ ಗಳಿಸಿದ್ದಾರೆ. ಪುಷ್ಪ 2 ಚಿತ್ರದ ಹಿಟ್‌ನೊಂದಿಗೆ ಕಿಸ್ಸಿಕ್ ಎಂದುಕೊಂಡು ಸಖತ್ ಸೌಂಡ್ ಮಾಡಿದ್ರು ಈ ಸೌತ್ ಬ್ಯೂಟಿ.
ನಟಿಗೆ ಈಗ ಸಾಲು ಸಾಲು ಅವಕಾಶಗಳು ಬರುತ್ತಿವೆ. ಎಲ್ಲರಿಗೂ ಗೊತ್ತಿರುವಂತೆ ಶ್ರೀಲೀಲಾ ಬಹಳ ಒಳ್ಳೆಯ ನೃತ್ಯಗಾರ್ತಿ. ಬ್ರೇಕ್, ಸಾಲ್ಸಾ ಮಾತ್ರವಲ್ಲದೆ ಅದ್ಭುತವಾದ ಭರತನಾಟ್ಯ ಪಟುವೂ ಹೌದು. ಜೊತೆಗೆ ಹಾಡು, ಸಂಗೀತ ವಾದ್ಯಗಳನ್ನು ಸಹ ನುಡಿಸಬಲ್ಲರು. ಅವರ ನೃತ್ಯ ಪ್ರತಿಭೆ ಬಾಲಿವುಡ್ ನಲ್ಲಿ ಬಹಳ ಉಪಯೋಗಕ್ಕೆ ಬರಲಿದೆ.
ಈಗ ಅವರಿಗೆ ಬಾಲಿವುಡ್ನಿಂದ ಮತ್ತೊಂದು ಬಂಪರ್ ಆಫರ್ ಬಂದಿದೆ. ಹಿಂದಿಯ ಸ್ಟಾರ್ ಹೀರೋ ಜೊತೆ ನಟಿಸೋ ಆಫರ್ ಅವರಿಗೆ ಸಿಕ್ಕಿದೆ. ಇದನ್ನು ಅವರು ಖುಷಿಯಿಂದ ಒಪ್ಪಿಕೊಂಡು ನಟಿಸುತ್ತಿದ್ದಾರೆ ಎಂದು ವರದಿ ಆಗಿದೆ. ರಶ್ಮಿಕಾ ಮಂದಣ್ಣ ರೀತಿ ಅವರು ಮುಂದೆ ಬಾಲಿವುಡ್ನಲ್ಲೇ ಸೆಟಲ್ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
‘ಡ್ರೀಮ್ ಗರ್ಲ್’ ಖ್ಯಾತಿಯ ರಾಜ್ ಶಾಂಡಿಲ್ಯ ಅವರು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದಕ್ಕೆ ಸಿದ್ದಾರ್ಥ್ ಮಲ್ಹೋತ್ರ ಅವರು ಹೀರೋ. ಈ ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ. ಶ್ರೀಲೀಲಾ ಹಾಗೂ ಅನನ್ಯಾ ಪಾಂಡೆ ಜೊತೆ ಮಾತುಕತೆ ನಡೆಯುತ್ತಿದೆ ಎಂದು ವರದಿ ಆಗಿದೆ. ಈ ಮೂಲಕ ಶ್ರೀಲೀಲಾಗೆ ದೊಡ್ಡ ಆಫರ್ ಒಂದು ಸಿಕ್ಕಂತೆ ಆಗಿದೆ.
‘ಡ್ರೀಮ್ ಗರ್ಲ್’ ಚಿತ್ರಕ್ಕೆ ಕಾರ್ತಿಕ್ ಆರ್ಯನ್ ಹೀರೋ. ಪಕ್ಕಾ ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಈ ರೀತಿಯ ಸಿನಿಮಾಗಳ ಮೂಲಕ ನಿರ್ದೇಶಕ ರಾಜ್ ಅವರು ಫೇಮಸ್ ಆಗಿದ್ದಾರೆ. ಈಗ ಬರಲಿರೋ ಸಿನಿಮಾದಲ್ಲೂ ಭರ್ಜರಿ ಕಾಮಿಡಿ ಇರಲಿದೆ. ಈ ಚಿತ್ರಕ್ಕೆ ಇಬ್ಬರು ನಾಯಕಿಯರು. ಈ ಕಾರಣಕ್ಕೆ ಶ್ರೀಲೀಲಾ ಹಾಗೂ ಅನನ್ಯಾ ಪಾಂಡೆ ಜೊತೆ ಮಾತುಕತೆ ನಡೆಯುತ್ತಿವೆ.
ಶ್ರೀಲೀಲಾ ಅವರು ಬಾಲಿವುಡ್ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಈಗಾಗಲೇ ಕಾರ್ತಿಕ್ ಆರ್ಯನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ‘ಆಶಿಕಿ 3’ ಚಿತ್ರಕ್ಕೆ ಅವರು ನಾಯಕಿ. ಈ ಸಿನಿಮಾದ ಶೂಟ್ ನಡೆಯುತ್ತಿದೆ. ಅವರನ್ನು ಇತ್ತೀಚೆಗೆ ಸಿನಿಮಾ ಒಂದರಿಂದ ಹೊರಕ್ಕೆ ಇಡಲಾದ ಬಗ್ಗೆ ವರದಿ ಆಗಿತ್ತು. ಹೀಗಿರುವಾಗಲೇ ಅವರಿಗೆ ಮತ್ತೆ ಬೇಡಿಕೆ ಬಂದಿದೆ. ಅಂದಹಾಗೆ, ರಶ್ಮಿಕಾ ಹಾಗೂ ಸಿದ್ದಾರ್ಥ್ ಈ ಮೊದಲು ‘ಮಿಷನ್ ಮಜ್ನು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು.
ನಿಮ್ಮ ಪ್ರತಿಕ್ರಿಯೆ ಏನು?






