ಕಮಲ್ ಹಾಸನ್’ಗೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್: ಕರ್ನಾಟಕದಲ್ಲಿ ಥಗ್ ಲೈಫ್ ಬಿಡುಗಡೆ ಇಲ್ಲ!

ಕನ್ನಡದ ಬಗ್ಗೆ ತಪ್ಪು ಹೇಳಿಕೆ ನೀಡಿ ಆ ಬಳಿಕ ಕ್ಷಮೆ ಕೇಳುವುದಿಲ್ಲ ಎಂದು ಕಮಲ್ ಹಾಸನ್ ವಾದ ಮಾಡಿದ್ದೇ ಇದಕ್ಕೆ ಕಾರಣ. ಈ ಮಧ್ಯೆ ‘ಥಗ್ ಲೈಫ್ ‘ ರಿಲೀಸ್ಗೆ ಭದ್ರತೆ ಕೋರಿ ಕಮಲ್ ಹಾಸನ್ ಅವರು ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಆ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆದಿದೆ.
ಥಗ್ ಲೈಫ್ ಮೂವಿ ಜೂನ್ 5ರಂದು ಎಲ್ಲಾ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಆದರೆ ಕನ್ನಡದಲ್ಲಿ ಜೂನ್ 5ರಂದು ಕಮಲ್ ಹಾಸನ್ ಅವರ ಸಿನಿಮಾ ರಿಲೀಸ್ ಆಗುವುದಿಲ್ಲ. ಕಮಲ್ ಹಾಸನ್ ಅವರು ಕನ್ನಡಕ್ಕೆ ಮಾಡಿರುವ ಈ ಸಮಸ್ಯೆ ಬಗೆಹರಿಯುವವರೆಗೂ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಪ್ರದರ್ಶನ ಇಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಜೂನ್10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್ ಒಂದು ವಾರದೊಳಗೆ ಇದನ್ನು ಇತ್ಯರ್ಥ ಪಡಿಸುವಂತೆ ಹೇಳಿದೆ.
ಕಮಲ್ ಹಾಸನ್ ಅವರು ಅಷ್ಟುದ್ದ ಪತ್ರ ಬರೆದರೂ ಕೂಡಾ ಕ್ಷಮೆ ಎನ್ನುವ ಒಂದು ಪದವನ್ನು ಬಳಸಿಲ್ಲ. ಇದನ್ನು ಕೋರ್ಟ್ ಕೂಡಾ ಗಮನಿಸಿದೆ. ಈ ಹಿನ್ನೆಲೆಯಲ್ಲಿ ನಟನಿಗೆ ಆತ್ಮಪ್ರತಿಷ್ಟೆ(ಇಗೋ) ಅವರಿಗೆ ಅಡ್ಡ ಬರುತ್ತಿರಬಹುದು. ಕಮಲ್ ಹಾಸನ್ ಯಾರೇ ಆಗಿರಲಿ. ಜನರ ಭಾವನೆ ನೋಯಿಸಬಾರದು ಎಂದು ಕೋರ್ಟ್ ಹೇಳಿದೆ.
ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಅಭಿಪ್ರಾಯ ತಿಳಿಸಿದ್ದು., ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ. ವಾಣಿಜ್ಯ ಮಂಡಳಿಯೊಂದಿಗೆ ಈ ಬಗ್ಗೆ ಚರ್ಚಿಸುತ್ತೇವೆ ಎಂದು ವಕೀಲರು ಹೇಳಿದ್ದಾರೆ. ಥಗ್ ಲೈಫ್ ಸಿನಿಮಾ ರಿಲೀಸ್ಗೆ ಭದ್ರತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






