‘ಕಾಟನ್ ಕ್ಯಾಂಡಿ’ಗೆ ಸಂಕಷ್ಟ: ಕದ್ದು ಟ್ಯೂನ್ ಮಾಡಿದ್ರಾ ಚಂದನ್ ಶೆಟ್ಟಿ?! ಆರೋಪವೇನು..?

ಕನ್ನಡ ಚಂದನ್ ಶೆಟ್ಟಿ ಹಾಡುಗಳಂದ್ರೆ ಬಲು ಮಜವಾಗಿ ಇರುತ್ತವೆ. ಸಿನಿಪ್ರೇಮಿಗಳು ಚಂದನ್ ಹಾಡುಗಳನ್ನ ತುಂಬಾನೆ ಎಂಜಾಯ್ ಮಾಡುತ್ತಾರೆ. ಚಂದನ್ ಬರೆಯೋ ಪ್ರತಿ ಹಾಡಲ್ಲೂ ಏನೋ ಒಂದ್ ಕಿಕ್ ಇರುತ್ತದೆ. ಸಂಗೀತ ಸಂಯೋಜಿಸೋ ಹಾಡುಗಳಲ್ಲೂ ಟ್ರೆಂಡಿ ಫೀಲ್ ಕಂಡಿತವಾಗಿಯೂ ಇರುತ್ತದೆ. ಚಂದನ್ ಹಾಡುಗಳನ್ನ ಹಾಡಿದರೆ ಮುಗೀತು, ಅದು ಫೀಲ್ ಡಬಲ್ ತ್ರಿಬಲ್ ಆಗಿಯೇ ಮಜಾ ಇರುತ್ತದೆ.
ಆದ್ರೆ ರಾಪರ್ ಚಂದನ್ ಶೆಟ್ಟಿಗೆ ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಬಿಡುಗಡೆ ಅಗಿರುವ 'ಕಾಟನ್ ಕ್ಯಾಂಡಿ' ಮ್ಯೂಸಿಕ್ ಆಲ್ಬಂ ಬಗ್ಗೆ ಆರೋಪ ಮಾಡಲಾಗಿದ್ದು, ಆ ಟ್ಯೂನ್ ಕದ್ದಿದ್ದು ಎನ್ನಲಾಗಿದೆ. 6 ವರ್ಷಗಳ ಹಿಂದೆಯೇ 'ವೈ ಬುಲ್ ಪಾರ್ಟಿ ಅನ್ನೋ ಸಾಂಗ್ ಮಾಡಿದ್ದ ಯುವರಾಜ್ ಇದೀಗ ಈ ಆರೋಪ ಮಾಡಿದ್ದಾರೆ. ಈ ಬಗ್ಗೆ ರಾಕ್ಸ್ಟಾರ್ ಯುವರಾಜ್ 'ಕಾಟನ್ ಕ್ಯಾಂಡಿ' ಟ್ಯೂನ್ ನನ್ನ ಈ ಹಿಂದಿನ ಪಾರ್ಟಿ ಸಾಂಗ್ ನಕಲಿನಂತೆಯೇ ಇದ್ದು, ದೂರು ನೀಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ನಟ-ಗಾಯಕ ಹಾಗು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಮ್ಯೂಸಿಕ್ ವಿಡಿಯೋ 'ಕಾಟನ್ ಕ್ಯಾಂಡಿ' ರಿಲಿಸ್ ಆಗಿದ್ದು ಸದ್ಯ ಟ್ರೆಂಡಿಂಗ್ ಕ್ರಿಯೇಟ್ ಮಾಡಿದೆ. 'ಕಾಟನ್ ಕ್ಯಾಂಡಿ' ಹೆಸರಿನ ಮ್ಯೂಸಿಕ್ ವಿಡಿಯೋದಲ್ಲಿ ನಟ, ಗಾಯಕ ಚಂದನ್ ಶೆಟ್ಟಿ ಜೋಡಿಯಾಗಿ ಸುಷ್ಮಿತಾ ಗೋಪಿನಾಥ್ ನಟಿಸಿದ್ದಾರೆ. ಈ ಹಾಡಿನಲ್ಲಿ ಚಂದನ್-ಸುಷ್ಮಿತಾ ಜೋಡಿ ಸಕತ್ ಮೋಡಿ ಮಾಡಿದ್ದಾರೆ, ಮೇಡ್ ಫಾರ್ ಈಚ್ ಅದರ್' ಎಂಬಂತೆ ಚಿಂದಿ ಮಾಡಿದ್ದಾರೆ.
ಯುವರಾಜ್ ಹೇಳೋದೇನು?
6 ವರ್ಷಗಳ ಹಿಂದೆ ವೈ ಬುಲ್ ಅನ್ನೋ ಪಾರ್ಟಿ ಸಾಂಗ್ ರಿಲೀಸ್ ಆಗಿದೆ. ಅದರ ಫಸ್ಟ್ ಪಲ್ಲವಿ, ಸೆಕೆಂಡ್ ಚರಣವನ್ನು ಚಂದನ್ ಶೆಟ್ಟಿ ಕಾಪಿ ಮಾಡಿದ್ದಾರೆ. ನಾನು ಬಡವ.. ಹಣ ಕೂಡಿಟ್ಟು, ಕೂಡಿಟ್ಟು 12 ಲಕ್ಷ ರೂಪಾಯಿ ಖರ್ಚು ಮಾಡಿ ಈ ಸಾಂಗ್ ಮಾಡಿದ್ದೆ. ಸಾಂಗ್ ಹಾಗೂ ಇವೆಂಟ್ ಇಂದ 17 ಲಕ್ಷ ರೂ. ಖರ್ಚಾಗಿದೆ.
ಕಾಟನ್ ಕ್ಯಾಂಡಿ ಸಾಂಗ್ನಲ್ಲಿ ನನ್ನ ಸಾಂಗ್ ಟ್ಯೂನ್ ಅಷ್ಟೇ ಅಲ್ಲ. ಇನ್ನೊಬ್ಬರ ಬಿಜಿಎಂ ಕೂಡ ಚಂದನ್ ಶೆಟ್ಟಿ ಕದ್ದಿದ್ದಾರೆ. ಚಂದನ್ ಶೆಟ್ಟಿ ಅವ್ರಿಗೂ ವೈ ಬುಲ್ ಹಾಡು ಚೆನ್ನಾಗಿ ಗೊತ್ತಿದೆ. ಇಷ್ಟಾದ್ರೂ ಟ್ಯೂನ್ ಕದ್ದಿರುವುದರ ಬಗ್ಗೆ ಇಲ್ಲಿಯವರೆಗೂ ಅವರು ಮಾತಾಡಿಲ್ಲ.
ಚಂದನ್ ಶೆಟ್ಟಿ ನನಗೆ ಮೊದಲಿಂದಲೂ ಪರಿಚಯ. ಚಂದನ್ ಶೆಟ್ಟಿ ಅವರು ಬಂದು ಮಾತಾಡುತ್ತಾರೆ ಅಂತಾ ಕಾಯ್ತಿದ್ದೆ. ಆದರೆ ಬಂದಿಲ್ಲ. ಮುಂದೆ ಕಾಪಿ ರೈಟ್ಸ್ ಹಾಕ್ತಿವಿ. ನೀವು ಬೆಳೆದಿದ್ದೀರಾ. ನಮ್ಮನ್ನ ಬೆಳೆಯೋಕೆ ಬಿಡಿ ಅಂತಾ ಯುವರಾಜ್, ಚಂದನ್ ಶೆಟ್ಟಿ ಮೇಲೆ ಆರೋಪ ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






