ಕೂದಲು ಉದುರುವಿಕೆಗೆ ಪರಿಹಾರ: ಆಹಾರದಲ್ಲಿ ಬದಲಾವಣೆ ಮಾಡಿ, ದಪ್ಪ ಕೂದಲು ಪಡೆಯಿರಿ

ಜುಲೈ 18, 2025 - 07:01
 0  10
ಕೂದಲು ಉದುರುವಿಕೆಗೆ ಪರಿಹಾರ: ಆಹಾರದಲ್ಲಿ ಬದಲಾವಣೆ ಮಾಡಿ, ದಪ್ಪ ಕೂದಲು ಪಡೆಯಿರಿ

ಕೂದಲು ಉದುರುವಿಕೆ, ತೆಳ್ಳಗಿನ ಕೂದಲು, ಬೆಳವಣಿಗೆ ಸಡಿಲ ಎಂಬ ಸಮಸ್ಯೆಗಳಿಂದ ಬಳಲುವವರು ಎಣ್ಣೆ, ಸೀರಮ್, ಪ್ಯಾಕ್ಗಳ ಬಳಕೆ ಹೆಚ್ಚಿಸುತ್ತಾರೆ. ಆದರೆ ಬಹಳಷ್ಟು ಜನರಿಗೆ ಇದರಿಂದ ಸತ್ವಫಲ ಸಿಗದು. ತಜ್ಞರ ಪ್ರಕಾರ, ಕೂದಲಿಗೆ ಹೊರಗಿನ ಶ್ರಂಗಾರಕ್ಕಿಂತ ಒಳಗಿನ ಪೋಷಣೆಯೇ ಹೆಚ್ಚು ಮುಖ್ಯ.

ಪೌಷ್ಟಿಕ ಆಹಾರದ ಮೂಲಕ ಕೂದಲು ದಪ್ಪವಾಗಿ, ಆರೋಗ್ಯಕರವಾಗಿ ಬೆಳೆಯಬಹುದು. ಪ್ರತಿದಿನ 1 ಚಮಚ ಚಿಯಾ ಬೀಜ, 1 ಚಮಚ ಅಗಸೆ ಬೀಜ ಅಥವಾ 7 ವಾಲ್ನಟ್ಗಳ ಸೇವನೆ ಮಾಡಿದರೆ 3 ರಿಂದ 6 ತಿಂಗಳಲ್ಲಿ ಕಣ್ಣಿಗೆ ಕಾಣುವಷ್ಟು ಬದಲಾವಣೆ ಕಾಣಬಹುದು.

ಕೂದಲು ಉದುರುವ ಪ್ರಮುಖ ಕಾರಣಗಳಲ್ಲಿ:

ಒತ್ತಡ

ಮಾಲಿನ್ಯ

ಪೌಷ್ಟಿಕಾಂಶದ ಕೊರತೆ

ಹಾರ್ಮೋನು ಸಮಸ್ಯೆ

ಕೆಟ್ಟ ಜೀವನಶೈಲಿ

ಇವುಗಳಿಂದ ಮುಕ್ತಿಯು ಆಹಾರದಿಂದಲೇ ಸಾಧ್ಯ. ವಿಶೇಷವಾಗಿ ಪುರುಷರಲ್ಲಿ ಬೋಳಾಗಲು ಕಾರಣವಾಗುವ DHT (ಡೈಹೈಡ್ರೊಟೆಸ್ಟೊಸ್ಟೆರಾನ್) ಹಾರ್ಮೋನ್ನಿಯಂತ್ರಣಕ್ಕೆ ಸಹ ಆಹಾರ ಸಹಕಾರಿಯಾಗಬಹುದು.

ತಜ್ಞರ ಸಲಹೆ:

ಬಾಹ್ಯ ಉತ್ಪನ್ನಗಳ ಬದಲು, ಒಳಗಿನ ಪೋಷಣೆಗೆ ಆದ್ಯತೆ ನೀಡಿದರೆ ಕೂದಲು ದಪ್ಪವಾಗಿ, ಆರೋಗ್ಯಕರವಾಗಿ ಬೆಳೆಯುವುದು ಖಚಿತ,” ಎಂದು ತಜ್ಞರು ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow