ಕೊಹ್ಲಿ, ಫಿಲ್ ಸಾಲ್ಟ್, ಪಾಟಿದಾರ್ ಅಬ್ಬರ: ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದ RCB

18ನೇ ಆವೃತ್ತಿಯ ಐಪಿಎಲ್ನ ಆರಂಭಿಕ ಪಂದ್ಯದಲ್ಲಿ ಕೆಕೆಆರ್ ಮತ್ತು ಆರ್ಸಿಬಿ ತಂಡಗಳು ಮುಖಾಮುಖಿಯಾಗಿದ್ದು. ಇಂದಿನ ಪಂದ್ಯದಲ್ಲಿ ಕೆ ಕೆ ಆರ್ ವಿರುದ್ದ ಆರ್ ಸಿಬಿ ಭರ್ಜರಿ ಜಯ ಗಳಿಸಿದೆ.. ಹೌದು ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ನೆರವಿನಿಂದ ಆರ್ಸಿಬಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್ 2025ರಲ್ಲಿ ಆರ್ಸಿಬಿ ಶುಭಾರಂಭ ಪಡೆದಿದೆ. ತವರಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ ಮುಖಭಂಗ ಅನುಭವಿಸಿದೆ
175 ರನ್ಗಳ ಬೆನ್ನಟ್ಟಿದ ಆರ್ಸಿಬಿಗೆ ಮೊದಲ ಓವರ್ನಲ್ಲೇ ಸ್ಫೋಟಕ ಆರಂಭ ಸಿಕ್ಕಿತು. ಈ ಓವರ್ನಲ್ಲಿ ಫಿಲ್ ಸಾಲ್ಟ್ 1 ಬೌಂಡರಿ ಹೊಡೆದರೆ, ವಿರಾಟ್ ಕೊಹ್ಲಿ ಕೂಡ ಬೌಂಡರಿಯೊಂದಿಗೆ ಖಾತೆ ತೆರೆದರು. ಈ ಓವರ್ನಿಂದ ಒಟ್ಟು 12 ರನ್ಗಳು ಬಂದವು. 2ನೇ ಓವರ್ನಲ್ಲಿ ಮ್ಯಾಜಿಕಲ್ ಸ್ಪೆಲ್ ಮಾಡಿದ ಸ್ಪೆನ್ಸರ್ ಜಾನ್ಸನ್ ಕೇವಲ 5 ರನ್ ನೀಡಿದರು. ಮೂರನೇ ಓವರ್ನಲ್ಲಿ ಮತ್ತೆ ದಾಳಿಗಿಳಿದ ವೈಭವ್ ಆರೋರಾ ಮೇಲೆ ಸಾಲ್ಟ್ ಬೌಂಡರಿಗಳ ಮಳೆಗರೆದರು. ಈ ಓವರ್ನಲ್ಲಿ ಸಾಲ್ಟ್ 1 ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದರೆ, ವಿರಾಟ್ ಕೊಹ್ಲಿ ಕೂಡ 2 ಬೌಂಡರಿ ಕಲೆಹಾಕಿದರು.
ವರುಣ್ ಓವರ್ನಲ್ಲಿ 21 ರನ್
ಹೀಗಾಗಿ 3 ಓವರ್ಗಳ ಮುಕ್ತಾಯಕ್ಕೆ ಆರ್ಸಿಬಿ 37 ರನ್ ಕಲೆಹಾಕಿತು. ಇದೇ ವೇಳೆ ನಾಯಕ ರಹಾನೆ ತಂಡದ ಭರವಸೆಯ ಬೌಲರ್ ವರುಣ್ ಚಕ್ರವರ್ತಿಗೆ ಬೌಲಿಂಗ್ ನೀಡಿದರು. ವರುಣ್ ಕೂಡ ಮೊದಲ 2 ಎಸೆತಗಳಲ್ಲಿ ಕೇವಲ 3 ರನ್ ಬಿಟ್ಟುಕೊಟ್ಟರು. ಆದರೆ ಉಳಿದ 4 ಎಸೆತಗಳಲ್ಲಿ ಬೌಂಡರಿಗಳು ಸಿಡಿದವು. ಮಾಜಿ ಕೆಕೆಆರ್ ಆಟಗಾರ ಫಿಲ್ ಸಾಲ್ಟ್ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ ಈ ಓವರ್ನಲ್ಲಿ 21 ರನ್ ಕಲೆಹಾಕಿದರು.
ಐದನೇ ಓವರ್ನಲ್ಲಿ ಉಗ್ರರೂಪ ತಾಳಿದ ವಿರಾಟ್ ಕೊಹ್ಲಿ, ಸ್ಪೆನ್ಸರ್ ಜಾನ್ಸನ್ ಎಸೆದ ಈ ಓವರ್ನ ಮೊದಲ ಎರಡು ಎಸೆತಗಳನ್ನು ಸಿಕ್ಸರ್ಗಟ್ಟಿದರು. ಹಾಗೆಯೇ ಈ ಓವರ್ನ ಕೊನೆಯ ಎಸೆತವನ್ನು ಸಾಲ್ಟ್ ಬೌಂಡರಿ ಬಾರಿಸಿದರು. ಐದನೇ ಓವರ್ ಅಂತ್ಯಕ್ಕೆ ಆರ್ಸಿಬಿ ಸ್ಕೋರ್ 75 ರನ್ ಆಗಿತ್ತು. ಆದರೆ 6ನೇ ಓವರ್ನಲ್ಲಿ ಮಿತವ್ಯಯದ ಬೌಲಿಂಗ್ ಮಾಡಿದ ಹರ್ಷಿತ್ ರಾಣಾ ಕೇವಲ 5 ರನ್ ಬಿಟ್ಟುಕೊಟ್ಟು ಆರ್ಸಿಬಿ ವೇಗಕ್ಕೆ ಕಡಿವಾಣ ಹಾಕಿದರು. ಆದಾಗ್ಯೂ ಆರ್ಸಿಬಿ ಮೊದಲ 6 ಓವರ್ಗಳಲ್ಲಿ 80 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.
ನಿಮ್ಮ ಪ್ರತಿಕ್ರಿಯೆ ಏನು?






