'ಕೌನ್ ಬನೇಗಾ ಕರೋಡ್ ಪತಿ' ಸೀಸನ್ 17 ಆರಂಭಕ್ಕೆ ಮೂಹರ್ತ ಫಿಕ್ಸ್: ಅಮಿತಾಭ್ ಬಚ್ಚನ್ ಪಡೆಯುವ ಸಂಭಾವನೆ ಎಷ್ಟು..?

ಜನಪ್ರಿಯ ಪ್ರಶ್ನೋತ್ತರ ಆಧಾರಿತ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್ ಪತಿ (ಕೆಬಿಸಿ)' ಇದರ 17ನೇ ಸೀಸನ್ ನ್ನು ಆಗಸ್ಟ್ 11ರಿಂದ ಪ್ರಾರಂಭಿಸಲಾಗುತ್ತಿದೆ. ಕಾರ್ಯಕ್ರಮದ ಹೊಸ ಪ್ರೋಮೋವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು, ಇದು ಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ.
ಈ ಬಾರಿ ಕೂಡ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ಮೂರನೇ ಸೀಸನ್ ಹೊರತುಪಡಿಸಿ, ಈವರೆಗೆ ಎಲ್ಲಾ ಸೀಸನ್ಗಳಿಗೆ ನಿರೂಪಕನಾಗಿ ಅವರು ಸೇವೆ ಸಲ್ಲಿಸಿದ್ದಾರೆ.
ಈ ಸೀಸನ್ಗೆ ಅಮಿತಾಭ್ ಬಚ್ಚನ್ ಅವರಿಗೆ ದೊರೆಯುತ್ತಿರುವ ಸಂಭಾವನೆ. ಮೂಲಗಳ ಪ್ರಕಾರ, ಅವರು ಪ್ರತಿ ಸಂಚಿಕೆಗೆ 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ವಾರದಲ್ಲಿ ಐದು ದಿನ ಪ್ರಸಾರವಾಗುವ ಕಾರಣ, ಅವರು ವಾರಕ್ಕೆ 25 ಕೋಟಿ ರೂಪಾಯಿ ಗಳಿಸುತ್ತಿದ್ದಾರೆ.
ಇದರಿಂದಾಗಿ ಅಮಿತಾಭ್ ಬಚ್ಚನ್ ಅವರು ಭಾರತೀಯ ದೂರದರ್ಶನದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕ ಎಂಬ ಬಿರುದನ್ನು ಮುಂದುವರೆಸಿದ್ದಾರೆ.
ಈ ವಿಷಯದಲ್ಲಿ ಅವರು ನಟ ಸಲ್ಮಾನ್ ಖಾನ್ ರನ್ನು ಹಿಂದಿಕ್ಕಿದ್ದಾರೆ. ‘ಬಿಗ್ ಬಾಸ್ ’ ನಿರೂಪಣೆ ಮಾಡಲು ಪ್ರತಿ ಸಂಚಿಕೆಗೆ ಸಲ್ಮಾನ್ ಅವರು 12 ಕೋಟಿ ರೂ. ಪಡೆಯುತ್ತಿದ್ದರು. ವಾರಕ್ಕೆ ಎರಡು ಸಂಚಿಕೆಗಳನ್ನು ಮಾತ್ರ ಮಾಡುವುದರಿಂದ ಅವರ ಗಳಿಕೆ 24 ಕೋಟಿ ರೂಪಾಯಿ.
ಸೋನಿ ಟಿವಿ ಏಪ್ರಿಲ್ 4 ರಂದು ಪ್ರೋಮೋ ವಿಡಿಯೋ ಮೂಲಕ ‘ಕೌನ್ ಬನೇಗಾ ಕರೋಡ್ಪತಿ 17’ ಅನ್ನು ಘೋಷಿಸಿತು. ‘ಕೆಬಿಸಿ 17’ ಗಾಗಿ ನೋಂದಣಿ ಪ್ರಾರಂಭವಾಗಿದೆ ಮತ್ತು ಸ್ಪರ್ಧಿಗಳು ಸೋನಿ ಲಿವ್ ಅಪ್ಲಿಕೇಶನ್, ಎಸ್ಎಂಎಸ್ ಅಥವಾ ಐವಿಆರ್ ಕರೆ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ಅದು ತಿಳಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?






