ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರ: ಹಿಂದೂ ಸಂಘಟನೆಗಳಿಂದ ದಾಳಿ!
ಧಾರವಾಡ: ಹಿಂದೂ ಜನಾಂಗದವರನ್ನು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ಕಾರ್ಯಕರ್ತರು ಧಾರವಾಡ ನಗರದ ಎರಡು ಕಡೆಗಳಲ್ಲಿ ನಡೆದಿದ್ದ ಕ್ರಿಶ್ಚಿಯನ್ ಧಾರ್ಮಿಕ ಕಾರ್ಯಕ್ರಮದ ಮೇಲೆ ದಾಳಿ ನಡೆಸಿದ್ದಾರೆ.
ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೋರ್ಟ್ ಸರ್ಕಲ್ ಬಳಿಯ ಬಿಕ್ಕಣ್ಣವರ ಬಿಲ್ಡಿಂಗ್ನ 1ನೇ ಮಹಡಿಯಲ್ಲಿ 21ವರ್ಷದ ಹಿಂದೆ ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರಗೊಂಡ ಫಾಸ್ಟರ್ ಪ್ರಕಾಶ ನಾರಾಯಣ ಸುತಾರ್ ಎಂಬುವವರ ನೇತೃತ್ವದಲ್ಲಿ 20 ಜನ ಕ್ರಿಶ್ಚಿಯನ್ ಧರ್ಮದ ಪ್ರಾರ್ಥನೆ ಮಾಡುತಿದ್ದ ವೇಳೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರು ದಾಳಿ ನಡೆಸಿ, ಒತ್ತಾಯಪೂರ್ವಕವಾಗಿ ಹಿಂದೂ ಸಮಾಜದವರನ್ನು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂದು ಪ್ರಾರ್ಥನೆಯನ್ನು ಬಂದ್ ಮಾಡಿಸಿದ್ದಾರೆ.
ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಕ್ರಿಶ್ಚಿಯನ್ ಧರ್ಮದ ಪ್ರಾರ್ಥನೆಯಲ್ಲಿ ಭಾಗಿಯಾದವರ ಪೂರ್ವಾಪರ ವಿಚಾರಿಸುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?