ಖ್ಯಾತ ಮಲಯಾಳಂ ನಟ ಉನ್ನಿ ಮುಕುಂದನ್ ವಿರುದ್ಧ ದಾಖಲಾಯ್ತು FIR!

ಮೇ 27, 2025 - 16:08
 0  7
ಖ್ಯಾತ ಮಲಯಾಳಂ ನಟ ಉನ್ನಿ ಮುಕುಂದನ್ ವಿರುದ್ಧ ದಾಖಲಾಯ್ತು FIR!

ಖ್ಯಾತ ಮಲಯಾಳಂ ನಟ ಉನ್ನಿ ಮುಕುಂದನ್ ವಿರುದ್ಧ FIR ದಾಖಲಾಗಿದೆ. ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. 

ಮುಕುಂದನ್ ಅವರ ಮ್ಯಾನೇಜರ್ ವಿಪಿನ್ ಕುಮಾರ್ ಅವರು ದೂರು ನೀಡಿದ್ದು, ಮತ್ತೊಬ್ಬ ನಟ ಅಭಿನಯಿಸಿರುವ ಚಿತ್ರವೊಂದರ ವಿಮರ್ಶೆಯನ್ನು ರೆಕಾರ್ಡ್ ಮಾಡಿದ್ದಕ್ಕಾಗಿ ನಟ ತನಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸೋಮವಾರ ಕಕ್ಕನಾಡ್‌ನಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯದ ನೆಲಮಾಳಿಗೆಯ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮುಕುಂದನ್ ನಿಂದನೀಯ ಭಾಷೆ ಬಳಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಟ ಉನ್ನಿ ಮುಕುಂದನ್ ವಿರುದ್ಧ ಮ್ಯಾನೇಜರ್ ವಿಪಿನ್ ಕುಮಾರ್ ದೂರು ನೀಡಿದ್ದಾರೆ. ಟೋವಿನೋ ಥಾಮಸ್ ನಟನೆಯ ‘ನರಿವೆಟ್ಟ’ ಸಿನಿಮಾ ಬಗ್ಗೆ ಮೆಚ್ಚಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ನಟ ಉನ್ನಿ ತಮಗೆ ಕಪಾಳಮೋಕ್ಷ ಮಾಡಿದ್ದಲ್ಲದೇ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಮ್ಯಾನೇಜರ್ ಉಲ್ಲೇಖಿಸಿದ್ದಾರೆ.

ಕೊಚ್ಚಿ ಇನ್ಫೋ ಪಾರ್ಕ್ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸೋದರ ಜೊತೆಗೆ ಮಲಯಾಳಂ ಕಲಾವಿದರ ಸಂಘದಲ್ಲಿಯೂ ಉನ್ನಿ ಮುಕುಂದನ್ ವಿರುದ್ಧ ಮ್ಯಾನೇಜರ್ ದೂರು ನೀಡಿರೋದಾಗಿ ತಿಳಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow