'ಗಣಪ' ಸಿನಿಮಾ ಖ್ಯಾತಿಯ ನಟ ಸಂತೋಷ್ ಬಾಲರಾಜ್’ಗೆ ಜಾಂಡಿಸ್: ಸ್ಥಿತಿ ಗಂಭೀರ

'ಕರಿಯ' ಚಿತ್ರದ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಮತ್ತು ನಟ ಸಂತೋಷ್ ಬಾಲರಾಜ್ (38) ಆರೋಗ್ಯ ಸ್ಥಿತಿ ಗಂಭೀರವಾಗಿರುವ ಬಗ್ಗೆ ಕುಟುಂಬ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅವರು ಇದೀಗ ಬೆಂಗಳೂರಿನ ಸಾಗರ್ ಅಪೊಲೋ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ತಿಂಗಳು ಜಾಂಡೀಸ್ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂತೋಷ್ ಚಿಕ್ಕ ಅವಧಿಯಲ್ಲಿ ಗುಣಮುಖರಾಗಿದ್ದರು. ಆದರೆ ಅನಂತರ ಮತ್ತೆ ತೀವ್ರ ಅಸ್ವಸ್ಥತೆಯು ಉಂಟಾಗಿ, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ ಅವರ ಸ್ಥಿತಿ ತೀವ್ರಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
‘ಗಣಪ’, ‘ಕರಿಯ-2’, ‘ಕೆಂಪ’, ‘ಬರ್ಕ್ಲೀ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಸಂತೋಷ್ ಬಾಲರಾಜ್ ಅವರ ‘ಸತ್ಯ’ ಎಂಬ ಹೊಸ ಚಿತ್ರ ಬಿಡುಗಡೆಯ ಸ್ಥಿತಿಯಲ್ಲಿದೆ. ಸದಾ ನಗುವಿನಿಂದ ಸ್ನೇಹಪೂರ್ಣವಾಗಿ ವರ್ತಿಸುತ್ತಿದ್ದ ಸಂತೋಷ್, ಒಂದೂವರೆ ವರ್ಷದ ಹಿಂದಷ್ಟೇ ತಮ್ಮ ತಂದೆ ಆನೇಕಲ್ ಬಾಲರಾಜ್ ಅವರನ್ನು ಕಳೆದುಕೊಂಡಿದ್ದರು. ಸದ್ಯದಲ್ಲೇ ಮದುವೆಯಾಗುವ ಸಿದ್ಧತೆಯಲ್ಲೂಇದ್ದರು ಎನ್ನಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






