ಗರ್ಭಿಣಿ ಹೆಂಡತಿಯನ್ನು ಕೊಂದು ಶವವನ್ನು ತುಂಡು ಮಾಡಿದ ಪತಿರಾಯ!

ಸೆಪ್ಟೆಂಬರ್ 3, 2025 - 22:02
 0  11
ಗರ್ಭಿಣಿ ಹೆಂಡತಿಯನ್ನು ಕೊಂದು ಶವವನ್ನು ತುಂಡು ಮಾಡಿದ ಪತಿರಾಯ!

ಹೈದರಾಬಾದ್: ಮೆಡಿಪಲ್ಲಿ ಪ್ರದೇಶದಲ್ಲಿ ನಡೆದ ಭೀಕರ ಘಟನೆ ಜನರಲ್ಲಿ ಆಘಾತ ಉಂಟುಮಾಡಿದೆ. ಗರ್ಭಿಣಿ ಪತ್ನಿಯನ್ನು ಕೊಂದು, ಶವವನ್ನು ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ಇಟ್ಟ ಪತಿಯ ಕೃತ್ಯ ಬೆಳಕಿಗೆ ಬಂದಿದೆ.

ಮೃತಳನ್ನು ಸ್ವಾತಿ ಅಲಿಯಾಸ್ ಜ್ಯೋತಿ (22) ಎಂದು ಗುರುತಿಸಲಾಗಿದೆ. ಆಕೆ ಮಹೇಂದರ್ ರೆಡ್ಡಿ ಅವರನ್ನು ವಿವಾಹವಾಗಿದ್ದರು. ದಂಪತಿಗಳು ಮೂಲತಃ ವಿಕಾರಾಬಾದ್ ಜಿಲ್ಲೆಯವರು. ಒಂದು ತಿಂಗಳ ಹಿಂದೆ ಬೋಡುಪ್ಪಲ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸಲು ಬಂದಿದ್ದರು.

ಮನೆ ಒಳಗಿನಿಂದ ಶಬ್ದ ಕೇಳಿದ ಅಕ್ಕಪಕ್ಕದವರು ಎಚ್ಚರಗೊಂಡು ಒಳಗೆ ಹೋಗಿದಾಗ, ಮಹಿಳೆಯ ಶವವನ್ನು ಚೀಲದಲ್ಲಿ ಇಟ್ಟಿರುವುದು ಕಂಡುಬಂದಿದೆ. ತಕ್ಷಣವೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಆರೋಪಿಯನ್ನಾದ ಮಹೇಂದರ್ ರೆಡ್ಡಿಯನ್ನು ವಶಕ್ಕೆ ಪಡೆದಿದ್ದಾರೆ.

ಪತಿಯೇ ಹೆಂಡತಿಯನ್ನು ಕೊಂದು ಶವವನ್ನು ವಿಲೇವಾರಿ ಮಾಡಲು ಯತ್ನಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಮಹಿಳೆ ಗರ್ಭಿಣಿಯಾಗಿದ್ದು ಪ್ರಕರಣಕ್ಕೆ ಇನ್ನಷ್ಟು ಗಂಭೀರತೆ ತಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow