ಗಲ್ಲಾಪೆಟ್ಟಿಗೆಯಲ್ಲಿ ರಿಷಬ್ ಶೆಟ್ಟಿ ಅಬ್ಬರ: 17 ದಿನದಲ್ಲಿ 506 ಕೋಟಿ ಕ್ಲಬ್ ಸೇರಿದ "ಕಾಂತಾರ ಚಾಪ್ಟರ್ 1"!

ಅಕ್ಟೋಬರ್ 19, 2025 - 20:02
 0  12
ಗಲ್ಲಾಪೆಟ್ಟಿಗೆಯಲ್ಲಿ ರಿಷಬ್ ಶೆಟ್ಟಿ ಅಬ್ಬರ: 17 ದಿನದಲ್ಲಿ 506 ಕೋಟಿ ಕ್ಲಬ್ ಸೇರಿದ "ಕಾಂತಾರ ಚಾಪ್ಟರ್ 1"!

ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆಯಾಗಿದ್ದು, 17 ದಿನಗಳ ಬಳಿಕವೂ ಯಶಸ್ವಿಯಾಗಿ ಪ್ರದರ್ಶನ ಕಂಡು ಭಾರತದಲ್ಲಿ 506 ಕೋಟಿ ರೂ. ಕಲೆಕ್ಷನ್ ಗಳಿಸಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಲವಾರು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಜನರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.

17ನೇ ದಿನ ಭಾರತದಲ್ಲಿ 12.50 ಕೋಟಿ ರೂ. ಕಲೆಕ್ಷನ್ ದಾಖಲಾಯಿತು.‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯ ವರದಿ ಪ್ರಕಾರ, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಟ್ಟಾರೆ 717.50 ಕೋಟಿ ರೂ. ಗಳಿಕೆ ದಾಖಲಿಸಿದೆ.ದೀಪಾವಳಿ ಹಬ್ಬದ ರಜೆಯ ಕಾರಣ ಚಿತ್ರಮಂದಿರಕ್ಕೆ ಹೆಚ್ಚಿನ ಜನರು ಬರುತ್ತಿದ್ದಾರೆ.

ನಟಿ ರುಕ್ಮಿಣಿ ವಸಂತ್ ಪ್ಯಾನ್ ಇಂಡಿಯಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.ಈ ಸಿನಿಮಾದ ಯಶಸ್ಸಿನಿಂದ ರಿಷಬ್ ಶೆಟ್ಟಿ ಖ್ಯಾತಿ ಮತ್ತಷ್ಟು ವಿಸ್ತಾರವಾಗಿದೆ ಮತ್ತು ಅವರ ಮುಂದಿನ ಚಿತ್ರಗಳ ನಿರೀಕ್ಷೆ ಹೆಚ್ಚಾಗಿದೆ.ಕಾಂತಾರ: ಚಾಪ್ಟರ್ 1’ ಯಶಸ್ಸು ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್‌ಗೆ ಹೊಸ ದಾಖಲೆ ಹಾಕಿದ್ದು, ಭಾರತೀಯ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow