ಗೆಳೆಯನ ಹೆಂಡತಿಯನ್ನು ತಾನಿಟ್ಟುಕೊಂಡು ತನ್ನ ಪತ್ನಿಯನ್ನು ಆತನಿಗೆ ಕೊಟ್ಟ ಸ್ನೇಹಿತ!

ಆಗಸ್ಟ್ 24, 2025 - 22:00
 0  39
ಗೆಳೆಯನ ಹೆಂಡತಿಯನ್ನು ತಾನಿಟ್ಟುಕೊಂಡು ತನ್ನ ಪತ್ನಿಯನ್ನು ಆತನಿಗೆ ಕೊಟ್ಟ ಸ್ನೇಹಿತ!

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ. ಒಂದೇ ಹಳ್ಳಿಯ ಸ್ನೇಹಿತರಿಬ್ಬರು ತಮ್ಮ ಹೆಂಡತಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದಾರೆ. ಮೂಲಗಳ ಪ್ರಕಾರ, ಅನೂಪ್ ಎಂಬ ಯುವಕ ತನ್ನ ಹೆಂಡತಿಯನ್ನು ಸ್ನೇಹಿತ ಪಪ್ಪು ಜೊತೆ ವಾಸಿಸುವಂತೆ ಒತ್ತಾಯಿಸಿ ಕಳುಹಿಸಿದ್ದಾನೆ.

ಬದಲಿಗೆ, ಪಪ್ಪುವಿನ ಹೆಂಡತಿಯೊಂದಿಗೆ ಅನೂಪ್ ಕಳೆದ ನಾಲ್ಕು ತಿಂಗಳಿನಿಂದ ವಾಸಿಸುತ್ತಿದ್ದಾನೆ. ಪಪ್ಪು ಕೂಡ ಸಂಬಂಧವನ್ನು ಒಪ್ಪಿಕೊಂಡಿದ್ದು, ಅನೂಪ್ ಹೆಂಡತಿಯನ್ನು ಕೋರ್ಟ್ ಮದುವೆಯ ಮೂಲಕ ತನ್ನೆಡೆ ಸೆಳೆದಿದ್ದಾನೆ ಎಂದು ಹೇಳಲಾಗಿದೆ.

ಅನೂಪ್ ಪತ್ನಿಯ ಹೇಳಿಕೆ ಪ್ರಕಾರ, ಮದುವೆಯಾದ ಕೆಲ ದಿನಗಳಲ್ಲೇ ಗಂಡ ಹಲ್ಲೆ ಮಾಡುತ್ತಿದ್ದು, ತಾಯಿಯ ಮನೆಗೆ ಬಿಟ್ಟು ಹೋಗಿದ್ದ. ನಂತರ ಅವಳ ಮೇಲೆ ಪಪ್ಪು ಜೊತೆ ಗಂಡ-ಹೆಂಡತಿಯಂತೆ ವಾಸಿಸಬೇಕೆಂದು ಒತ್ತಡ ಹೇರಲಾಗಿತ್ತಂತೆ. ಒಪ್ಪದಿದ್ದರೆ ಕೊಲ್ಲುವುದಾಗಿ ಗಂಡ ಬೆದರಿಕೆ ಹಾಕಿದ್ದಾನೆ ಎಂದೂ ಆಕೆ ಆರೋಪಿಸಿದ್ದಾಳೆ.

ಮತ್ತೊಂದೆಡೆ, ಪಪ್ಪು ತನ್ನ ಪತ್ನಿ ಮತ್ತು ಅನೂಪ್ ನಡುವೆ ಅಕ್ರಮ ಸಂಬಂಧ ಬೆಳೆದಿದೆ ಎಂದು ಹೇಳಿದ್ದು, ಇಬ್ಬರೂ ಕೋರ್ಟ್ ಮದುವೆಯೂ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ತನ್ನ ಹೆಂಡತಿ ಸಹ ಸಂಬಂಧಕ್ಕೆ ಬೆಂಬಲ ನೀಡುತ್ತಿದ್ದಾಳೆ ಎಂದೂ ಪಪ್ಪು ದೂರಿದ್ದಾರೆ. ಇದೀಗ, ಗಂಡ-ಹೆಂಡತಿ ವಿನಿಮಯದ ವಿಚಿತ್ರ ಪ್ರಕರಣದಲ್ಲಿ ನಿಜ ಏನು ಎಂಬುದನ್ನು ಪತ್ತೆಹಚ್ಚುವುದು ಪೊಲೀಸರು ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow