ಗೌತಮ್ ಗಂಭೀರ್ ಗೆ ಬಿಗ್ ಶಾಕ್: ಮುಖ್ಯ ಕೋಚ್ ಪವರ್ ಕಟ್ ಮಾಡಿದ BCCI! ಏನದು?

ಜನವರಿ 16, 2025 - 09:02
 0  5
ಗೌತಮ್ ಗಂಭೀರ್ ಗೆ ಬಿಗ್ ಶಾಕ್: ಮುಖ್ಯ ಕೋಚ್ ಪವರ್ ಕಟ್ ಮಾಡಿದ BCCI! ಏನದು?

ಗೌತಮ್ ಗಂಭೀರ್ ಹೆಡ್‌ಕೋಚ್ ಆಗಿ ನೇಮಕಗೊಂಡ ನಂತರ ಟೀಮ್ ಇಂಡಿಯಾದಲ್ಲಿ ಎಲ್ಲವೂ ಬದಲಾಗಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಟೆಸ್ಟ್ ಸರಣಿಗಳನ್ನು ಟೀಮ್ ಇಂಡಿಯಾ ಕಳೆದುಕೊಂಡಿದೆ. ಈ ಸೋಲಿನ ನಂತರ ಟೀಮ್ ಇಂಡಿಯಾ ಆಟಗಾರರು ಸೇರಿದಂತೆ ಗೌತಮ್ ಗಂಭೀರ್ ಕೂಡ ಟೀಕೆಗಳನ್ನು ಎದುರಿಸುವಂತಾಗಿದೆ. 

ಇದೀಗ ಟೀಮ್​ ಇಂಡಿಯಾ ಮುಖ್ಯ ಕೋಚ್​ಗೆ ಬಿಗ್​ ಶಾಕ್​​ ಎದುರಾಗಿದ್ದು, BCCI ಗಂಭೀರ್​ ಪವರ್​ ಕಟ್​​ ಮಾಡಿದೆ. ಇತ್ತೀಚೆಗಷ್ಟೇ ಕೋಚ್​ ಗೌತಮ್​ ಗಂಭೀರ್​, ಕ್ಯಾಪ್ಟನ್​ ರೋಹಿತ್​ ಶರ್ಮಾ, ಚೀಫ್​ ಸೆಲೆಕ್ಟರ್​ ಅಜಿತ್​ ಅಗರ್ಕರ್​ ಜೊತೆ ಬಾಸ್​ಗಳು ರಿವ್ಯೂ ಮೀಟಿಂಗ್​ ನಡೆಸಿದ್ರು. ಈಗ ಹೈವೋಲ್ಟೆಜ್​ ಸಭೆಯ ಬಳಿಕ ಹೊಸ ರೂಲ್ಸ್​ ಜಾರಿಗೆ ತರಲು ಬಿಗ್​ಬಾಸ್​ಗಳು ಮುಂದಾಗಿದ್ದಾರೆ.

ಟೀಮ್​ ಇಂಡಿಯಾ ಕ್ರಿಕೆಟರ್ಸ್​ ಫಾರಿನ್​ ಟೂರ್​​ ಹೊರಟ್ರೆ ಸಾಕು. ಪತ್ನಿ, ಮಕ್ಕಳು, ಫ್ಯಾಮಿಲಿ ಎಂಟ್ರಿಗೆ ಬಿಸಿಸಿಐ ಫ್ರಿಡಂ ನೀಡಿತ್ತು. ಮುಕ್ತಾಯವಾದ ಆಸಿಸ್​ ಟೂರ್​ನಲ್ಲೂ ಬಿಗ್​ ಸ್ಟಾರ್​ಗಳಾದ ವಿರಾಟ್​ ಕೊಹ್ಲಿ, ಜಸ್​ಪ್ರಿತ್​ ಬೂಮ್ರಾ, ರಾಹುಲ್​ ಕೂಡ ಪತ್ನಿಯರ ಜೊತೆ ಬ್ಯುಸಿಯಾಗಿದ್ರು.

ಆಟಗಾರರು ಆಟದ ಮೇಲೆ ಗಮನವಹಿಸೋದನ್ನ ಕಡಿಮೆ ಮಾಡಿ, ಟೂರ್​ಗಳಲ್ಲಿ ಫ್ಯಾಮಿಲಿಗಳಿಗೆ ಹೆಚ್ಚು ಸಮಯ ನೀಡೋಕೆ ಶುರುವಿಟ್ಟುಕೊಂಡಿದ್ದು ಬಿಸಿಸಿಐ ಬಾಸ್​ಗಳ ಕಣ್ಣು ಕೆಂಪಾಗಿಸಿದ್ದು, ಸ್ಟ್ರಿಕ್ಟ್​ ರೂಲ್ಸ್​ ಜಾರಿಗೆ ಮುಂದಾಗಿದ್ದಾರೆ. 45ಕ್ಕಿಂತ ಹೆಚ್ಚು ದಿನಗಳ ಟೂರ್​​ ಇದ್ರೆ, 14 ದಿನ ಮಾತ್ರ ಕುಟುಂಬದ ಜೊತೆಗಿರಲು ಅನುಮತಿ ನೀಡಲು ಬಾಸ್​​ಗಳು ತೀರ್ಮಾನಿಸಿದ್ದಾರೆ

ಕೋಚ್​​ ಆಗಲು ಗಂಭೀರ್​ ಒಪ್ಪಿದ್ದೇ ತಡ, ಕೇಳಿದ್ದಕ್ಕೆಲ್ಲಾ ಬಿಸಿಸಿಐ ಬಾಸ್​ಗಳು ಅಸ್ತು ಎಂದಿದ್ರು. ಎಷ್ಟರಮಟ್ಟಿಗೆ ಅಂದ್ರೆ, ಈ ಹಿಂದೆ ಟೀಮ್​ ಇಂಡಿಯಾದ ಕೋಚ್​ಗೂ ಪರ್ಸನಲ್​ ಮ್ಯಾನೇಜರ್​​ ಇರಲಿಲ್ಲ. ಆದ್ರೀಗ, ಗಂಭೀರ್​ಗೆ ವೈಯಕ್ತಿಕವಾಗಿ ಗೌರವ್​ ಅರೋರ ಎಂಬ ಪರ್ಸನಲ್​ ಮ್ಯಾನೇಜರ್​ ಇದ್ರು. ಇದೀಗ ಬಿಸಿಸಿಐ ಬಾಸ್​ಗಳು ಇದನ್ನೆಲ್ಲಾ ಟೀಮ್​ ಇಂಡಿಯಾದಿಂದ ದೂರ ಇಡುವಂತೆ ಖಡಕ್​ ಸೂಚನೆ ನೀಡಿದ್ದಾರೆ. ಈ ಗೌರವ್​ ಅರೋರಗೆ ಇನ್ಮುಂದೆ ಟೀಮ್​ ಹೋಟೆಲ್​ಗೆ ಎಂಟ್ರಿ ಇಲ್ಲ. ಟೀಮ್​ ಬಸ್​ನಲ್ಲಿ ಟ್ರಾವೆಲ್​ ಮಾಡುವಂತಿಲ್ಲ. ಪಂದ್ಯದ ವೇಳೆ ವಿಐಪಿ ಬಾಕ್ಸ್​ನಲ್ಲಿ ಕೂರುವಂತಿಲ್ಲ ಎಂದು ವಾರ್ನ್​ ಮಾಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow