ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ "I LOVE YOU" ಮೆಸೇಜ್: PDO ವಿರುದ್ಧ FIR ದಾಖಲು!

ಚಿಕ್ಕಬಳ್ಳಾಪುರ: ರಾಶ್ಚೆರುವ ಗ್ರಾಮದ ಪಂಚಾಯಿತಿ ಅಧ್ಯಕ್ಷೆ ರೇವತಿಗೆ ಪಿಡಿಓ ಅಶೋಕ್ ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆ ಎಂಬ ಗಂಭೀರ ಆರೋಪ ಹೊರವಾಗಿದೆ. "I LOVE YOU" ಎಂದು ಸಂದೇಶ ಕಳಿಸಿರುವುದರೊಂದಿಗೆ, ಖಾಲಿ ಚೆಕ್ಗಳಿಗೆ ಸಹಿ ಹಾಕುವಂತೆ ಒತ್ತಡ ಹೇರಲಾಗಿದೆ ಎಂದು ಆರೋಪಿಸಲಾಗಿದೆ.
ಅಷ್ಟೇ ಅಲ್ಲದೆ, ಅಶೋಕ್ ಜೊತೆಗೆ ಮಾಜಿ ಅಧ್ಯಕ್ಷೆಯ ಪತಿ ಎ.ಎನ್. ಬಾಬು ರೆಡ್ಡಿ, ಹಾಲಿ ಸದಸ್ಯರಾದ ನಾಗೇಶ್ ಹಾಗೂ ಭಾನು ಪ್ರಕಾಶ್ ಕೂಡ ಸೇರಿಕೊಂಡು ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿರುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೂರಿನಲ್ಲಿ ತಿಳಿಸಿದ್ದಾರೆ. ಈ ಆರೋಪಗಳ ಹಿನ್ನೆಲೆಯಲ್ಲಿ, ಚೇಳೂರು ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






