New Rules: ಇಂದಿನಿಂದ ಹೊಸ ನಿಯಮಗಳು: ಯುಪಿಐ, ಎಲ್ಪಿಜಿ, ಬಡ್ಡಿಯಲ್ಲಿ ಬದಲಾವಣೆ?
ಇಂದು (ಅಕ್ಟೋಬರ್ 1)ದಿಂದ ಹಲವಾರು ಆರ್ಥಿಕ ಮತ್ತು ದೈನಂದಿನ ಜೀವನಕ್ಕೆ ಸಂಬಂಧಿಸಿದ ಬದಲಾವಣೆಗಳು ಜಾರಿಯಾಗಲಿವೆ. ಇವು ಸಾಮಾನ್ಯ ಜನರ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆಯಿದೆ.ಇದೇ ದಿನದಿಂದ ನ್ಯಾಷನಲ್ ಪೆನ್ಷನ್ ಸಿಸ್ಟಮ್ನಲ್ಲಿ (NPS) ಮುಖ್ಯ ಬದಲಾವಣೆ ಆಗಲಿದೆ. ಈಗಿನಿಂದ NPS ಚಂದಾದಾರರು 100% ಹೂಡಿಕೆಗಳನ್ನು ಈಕ್ವಿಟಿಗಳಲ್ಲಿ ಮಾಡಬಹುದು. ಹಿಂದಿನಂತೆ, ಗವರ್ನೆಮೆಂಟ್ ಹೊರಗಿನ ಚಂದಾದಾರರಿಗೆ ಈಕ್ವಿಟಿ ಹೂಡಿಕೆ ಮಿತಿಯು 75% ಮಾತ್ರವಿತ್ತು.
ಆರ್ಬಿಐ ರೆಪೊ ದರ ನಿರ್ಧಾರ
-
ಭಾರತೀಯ ರಿಸರ್ವ್ ಬ್ಯಾಂಕ್ನ ಮಾನಿಟರಿ ಪಾಲಿಸಿ ಕಮಿಟಿ ಇಂದು ಸಭೆ ನಡೆಸಲಿದೆ.
-
ಈ ಬಾರಿ 25 ಬೇಸಿಸ್ ಪಾಯಿಂಟ್ಗಳಷ್ಟು ರೆಪೊ ದರ ಕಡಿತ ಮಾಡುವ ಸಾಧ್ಯತೆ ಇದೆ ಎಂದು ಎಸ್ಬಿಐ ರಿಸರ್ಚ್ ತಂಡ ಅಂದಾಜು ಮಾಡಿದೆ.
-
ಆದರೆ ಕೆಲ ತಜ್ಞರು ದರ ಕಡಿತ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಯುಪಿಐ ನಿಯಮ ಬದಲಾವಣೆ
-
‘ಕಲೆಕ್ಟ್ ರಿಕ್ವೆಸ್ಟ್’ ಫೀಚರ್ ಅನ್ನು ನಿಲ್ಲಿಸಲಾಗುತ್ತಿದೆ.
-
ಇದರಿಂದ ವಂಚನೆ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶ.
-
ಬಳಕೆದಾರರು ಇನ್ನು ಮುಂದೆ ಯುಪಿಐ ಮೂಲಕ ಹಣಕ್ಕಾಗಿ ಮನವಿ ಸಲ್ಲಿಸಲು ಸಾಧ್ಯವಿಲ್ಲ.
ರೈಲು ಟಿಕೆಟ್ ಬುಕಿಂಗ್ನಲ್ಲಿ ಬದಲಾವಣೆ
-
ಆಧಾರ್ ದೃಢೀಕರಿಸಿದ ಪ್ರಯಾಣಿಕರಿಗೆ ವಿಶೇಷ ಅವಕಾಶ.
-
ಇವರು ಇತರ ಪ್ರಯಾಣಿಕರಿಗಿಂತ 15 ನಿಮಿಷಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಲು ಅವಕಾಶ ಪಡೆಯುತ್ತಾರೆ.
ಎಲ್ಪಿಜಿ ಬೆಲೆ ಪರಿಷ್ಕರಣೆ
-
ಪ್ರತಿ ತಿಂಗಳಂತೆ, ಇಂದು ಸಹ ಗೃಹಬಳಕೆ ಮತ್ತು ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರಗಳು ಪರಿಷ್ಕೃತ ಆಗುತ್ತವೆ.
-
ಬೆಲೆ ಏರಿಳಿತವು ನೇರವಾಗಿ ಮನೆಮಂದಿಯ ಖರ್ಚಿನ ಮೇಲೆ ಪರಿಣಾಮ ಬೀರುತ್ತದೆ.
ಆನ್ಲೈನ್ ಗೇಮಿಂಗ್ ನಿಯಮಗಳು
ಆನ್ಲೈನ್ ಗೇಮಿಂಗ್ನಲ್ಲಿ ವಂಚನೆಯನ್ನು ತಡೆಗಟ್ಟಲು ಅಕ್ಟೋಬರ್ 1 ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಆನ್ಲೈನ್ ಗೇಮಿಂಗ್ ಮಸೂದೆ 2025 ರ 1 ರಿಂದ ಜಾರಿಗೆ ಬರಲಿದೆ. ಇಂದಿನಿಂದ, ಹಣಕ್ಕಾಗಿ ಆನ್ಲೈನ್ನಲ್ಲಿ ಆಡುವ ಎಲ್ಲಾ ಆಟಗಳನ್ನು ನಿಷೇಧಿಸುವ ಸಾಧ್ಯತೆಯಿದೆ. ಈ ಬದಲಾವಣೆಗಳು ನಿಮ್ಮ ಹಣಕಾಸು ನಿರ್ವಹಣೆ ಹಾಗೂ ದಿನನಿತ್ಯದ ಖರ್ಚುಗಳಿಗೆ ಪ್ರಭಾವ ಬೀರುವ ಸಾಧ್ಯತೆ ಇದೆ.
ನಿಮ್ಮ ಪ್ರತಿಕ್ರಿಯೆ ಏನು?