Bank Holidays Oct 2025: ಹಬ್ಬ ಹರಿದಿನಗಳೇ ಇರುವ ಅಕ್ಟೋಬರ್ʼನಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ!
ಬೆಂಗಳೂರು: ಹಬ್ಬದ ಸೀಸನ್ ಇರುವ ಅಕ್ಟೋಬರ್ ತಿಂಗಳಲ್ಲಿ ಶನಿವಾರ, ಭಾನುವಾರ ಹಾಗೂ ಪ್ರಾದೇಶಿಕ ರಜೆಗಳನ್ನು ಸೇರಿಸಿ ದೇಶದಾದ್ಯಂತ ಬ್ಯಾಂಕುಗಳು 21 ದಿನಗಳ ಕಾಲ ಮುಚ್ಚಿರುತ್ತವೆ. ಕರ್ನಾಟಕದಲ್ಲಿ ಮಾತ್ರ 11 ದಿನ ಬ್ಯಾಂಕ್ ರಜೆಯಿರಲಿದೆ.
ಅಕ್ಟೋಬರ್ ತಿಂಗಳಲ್ಲಿ ಗಾಂಧಿ ಜಯಂತಿ, ವಿಜಯದಶಮಿ, ದುರ್ಗಾ ಪೂಜೆ, ವಾಲ್ಮೀಕಿ ಜಯಂತಿ, ಕರ್ವಾ ಚೌತ್, ದೀಪಾವಳಿ, ಬಲಿಪಾಡ್ಯಮಿ, ಭಾಯಿ ದೂಜ್, ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ ಮುಂತಾದ ಹಬ್ಬ-ಜಯಂತಿಗಳು ಬರುವುದರಿಂದ ರಜೆಯ ಸರಮಾಲೆಯೇ ಇದೆ.
ದೇಶವ್ಯಾಪಿ ಮುಖ್ಯ ರಜಾದಿನಗಳು:
-
ಅಕ್ಟೋಬರ್ 1: ಮಹಾನವಮಿ
-
ಅಕ್ಟೋಬರ್ 2: ಗಾಂಧಿ ಜಯಂತಿ, ವಿಜಯದಶಮಿ
-
ಅಕ್ಟೋಬರ್ 20-23: ದೀಪಾವಳಿ ಸಂಭಂಧಿತ ರಜೆಗಳು
-
ಅಕ್ಟೋಬರ್ 27-28: ಛಾತ್ ಪೂಜೆ
-
ಅಕ್ಟೋಬರ್ 31: ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ (ಗುಜರಾತ್‌ನಲ್ಲಿ)
ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳು:
-
ಅಕ್ಟೋಬರ್ 1 (ಮಹಾನವಮಿ)
-
ಅಕ್ಟೋಬರ್ 2 (ಗಾಂಧಿ ಜಯಂತಿ, ವಿಜಯದಶಮಿ)
-
ಅಕ್ಟೋಬರ್ 5 (ಭಾನುವಾರ)
-
ಅಕ್ಟೋಬರ್ 7 (ವಾಲ್ಮೀಕಿ ಜಯಂತಿ)
-
ಅಕ್ಟೋಬರ್ 11 (ಎರಡನೇ ಶನಿವಾರ)
-
ಅಕ್ಟೋಬರ್ 12 (ಭಾನುವಾರ)
-
ಅಕ್ಟೋಬರ್ 19 (ಭಾನುವಾರ)
-
ಅಕ್ಟೋಬರ್ 20 (ದೀಪಾವಳಿ)
-
ಅಕ್ಟೋಬರ್ 22 (ಬಲಿಪಾಡ್ಯಮಿ)
-
ಅಕ್ಟೋಬರ್ 25 (ನಾಲ್ಕನೇ ಶನಿವಾರ)
-
ಅಕ್ಟೋಬರ್ 26 (ಭಾನುವಾರ)
ಗಮನಿಸಬೇಕಾದದ್ದು:
ಬ್ಯಾಂಕುಗಳು ಬಂದ್ ಆದರೂ ಆನ್‌ಲೈನ್ ಬ್ಯಾಂಕಿಂಗ್, ಯುಪಿಐ, ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳು 24 ಗಂಟೆಗಳಿಗೂ ಲಭ್ಯ ಇರುತ್ತವೆ. ಆದರೆ ಚೆಕ್ ಕ್ಲಿಯರಿಂಗ್, ಡಿಡಿ, ಆರ್‌ಟಿಜಿಎಸ್ ಮುಂತಾದ ಸೇವೆಗಳಿಗಾಗಿ ಬ್ಯಾಂಕ್ ಕಚೇರಿಗಳಿಗೆ ತೆರಳಬೇಕಾಗಿರುವವರು ಈ ರಜಾದಿನಗಳನ್ನು ಗಮನಿಸಿ ಮುಂಚಿತವಾಗಿ ಯೋಜಿಸಿಕೊಳ್ಳುವುದು ಅಗತ್ಯ.
ನಿಮ್ಮ ಪ್ರತಿಕ್ರಿಯೆ ಏನು?