ಚಾಂಪಿಯನ್ ಟ್ರೋಫಿಗೆ ಕ್ಷಣಗಣನೆ: ಆಟಗಾರರಿಗೆ ಸಿಗುವ ಸಂಭಾವನೆ ಎಷ್ಟು? ಇಷ್ಟೊಂದು ಕಡಿಮೆನಾ?

ಫೆಬ್ರವರಿ 16, 2025 - 14:15
 0  9
ಚಾಂಪಿಯನ್ ಟ್ರೋಫಿಗೆ ಕ್ಷಣಗಣನೆ: ಆಟಗಾರರಿಗೆ ಸಿಗುವ ಸಂಭಾವನೆ ಎಷ್ಟು? ಇಷ್ಟೊಂದು ಕಡಿಮೆನಾ?

ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ವಿಜೇತರು, ರನ್ನರ್​ಅಪ್ ತಂಡ ಗಳಿಸುವ ಬಹುಮಾನ ಮೊತ್ತ ಎಷ್ಟೆಂಬುದನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. 2017ರ ಆವೃತ್ತಿಯಲ್ಲಿ ಪಡೆದ ಮೊತ್ತಕ್ಕಿಂತ ಶೇ 53ರಷ್ಟು ಏರಿಕೆ ಕಂಡಿದೆ. 

ಹೌದು, ಚಾಂಪಿಯನ್ ಟ್ರೋಫಿಗೆ ಕ್ಷಣಗಣನೆ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. 

ಫೆಬ್ರವರಿ 19 ರಿಂದ ಶುರುವಾಗಲಿರುವ ಈ ಟೂರ್ನಿಯ ಒಟ್ಟು ಬಹುಮಾನ ಮೊತ್ತ 6.9 ಮಿಲಿಯನ್ ಅಮೆರಿಕನ್ ಡಾಲರ್. ಅಂದರೆ ಭಾರತೀಯ ರೂಪಾಯಿ ಮೌಲ್ಯ 59,81,06,861 ಕೋಟಿ ರೂ. ಈ 59.81 ಕೋಟಿ ರೂ. ಬಹುಮಾನ ಮೊತ್ತವನ್ನು ವಿವಿಧ ಹಂತಗಳಲ್ಲಿ ವಿಂಗಡಿಸಲಾಗಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡಕ್ಕೆ ಗರಿಷ್ಠ ಬಹುಮಾನ ಮೊತ್ತ ಸಿಗಲಿದೆ. ಇನ್ನುಳಿದ 7 ತಂಡಗಳಿಗೂ ಪ್ರೈಸ್ ಮನಿ ಸಿಗಲಿದೆ. ಇಲ್ಲಿ ಯಾವ ತಂಡಕ್ಕೆ ಎಷ್ಟು ಮೊತ್ತ ಸಿಗಲಿದೆ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಚಾಂಪಿಯನ್ಸ್ ತಂಡಕ್ಕೆ- 2.24 ಮಿಲಿಯನ್ ಯುಎಸ್ ಡಾಲರ್ (ಸುಮಾರು 20 ಕೋಟಿ ರೂ.)
ರನ್ನರ್ ಅಪ್ ತಂಡಕ್ಕೆ- 1.12 ಮಿಲಿಯನ್ ಯುಎಸ್ ಡಾಲರ್ (ಸುಮಾರು 10 ಕೋಟಿ ರೂ.)
ಸೆಮಿಫೈನಲ್​ನಲ್ಲಿ ಸೋತ ತಂಡಗಳಿಗೆ- ತಲಾ 5 ಕೋಟಿ ರೂ.
5 ಮತ್ತು 6ನೇ ಸ್ಥಾನ ಪಡೆದ ತಂಡಗಳಿಗೆ- ತಲಾ 3 ಕೋಟಿ ರೂ.
7 ಮತ್ತು 8ನೇ ಸ್ಥಾನ ಪಡೆದ ತಂಡಗಳಿಗೆ- ತಲಾ 1 ಕೋಟಿ 20 ಲಕ್ಷ ರೂ. ಸಿಗಲಿದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯ ಎಂದರೆ ಐಸಿಸಿ ಚಾಂಪಿಯನ್ಸ್ ಹಾಗೂ ರನ್ನರ್ ಅಪ್ ತಂಡಗಳಿಗೆ ನೀಡುವ ಬಹುಮಾನ ಮೊತ್ತ. ಈ ಪ್ರೈಸ್ ಮನಿಗಿಂತಲೂ ಅಧಿಕ ಮೊತ್ತವನ್ನು ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ಮೂಲಕ ಕೆಲ ಆಟಗಾರರು ಪಡೆದುಕೊಂಡಿದ್ದಾರೆ.

ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ಫ್ರಾಚೈಸಿ ರಿಷಭ್ ಪಂತ್ ಅವರನ್ನು ಬರೋಬ್ಬರಿ 27 ಕೋಟಿ ರೂ.ಗೆ ಖರೀದಿಸಿದೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಶ್ರೇಯಸ್ ಅಯ್ಯರ್​​ಗೆ 26.75 ಕೋಟಿ ರೂ. ನೀಡಲಿದೆ.

ಅಂದರೆ ವಿಶ್ವ ಕ್ರಿಕೆಟ್ ಪಂದ್ಯಾವಳಿಯಲ್ಲಿ ನೀಡಲಾಗುವ ಬಹುಮಾನ ಮೊತ್ತಕ್ಕಿಂತ ಅಧಿಕ ಮೊತ್ತವನ್ನು ಟೀಮ್ ಇಂಡಿಯಾ ಆಟಗಾರರು ಐಪಿಎಲ್​ನಲ್ಲಿ ಕೇವಲ 14 ಪಂದ್ಯಗಳನ್ನಾಡಿ ಪಡೆಯುತ್ತಿದ್ದಾರೆ. ಹೀಗಾಗಿಯೇ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಬಹುಮಾನ ಮೊತ್ತದ ಘೋಷಣೆಯು ನಗೆಪಾಟಲಿಗೀಡಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow