ಕರುನಾಡಿನಲ್ಲಿದೆ ಪಿಂಕ್ ಬೈಕ್ ಸೇವೆ: ಮಹಿಳೆಯರಿಗೆ ಸಿಗಲಿದೆ ಭರ್ಜರಿ ಉದ್ಯೋಗ!

ಫೆಬ್ರವರಿ 16, 2025 - 08:08
 0  7
ಕರುನಾಡಿನಲ್ಲಿದೆ ಪಿಂಕ್ ಬೈಕ್ ಸೇವೆ:  ಮಹಿಳೆಯರಿಗೆ ಸಿಗಲಿದೆ ಭರ್ಜರಿ ಉದ್ಯೋಗ!

ಕರ್ನಾಟಕದಲ್ಲಿ ಪಿಂಕ್ ರಾಪಿಡೋ' ಬೈಕ್‌ಗಳನ್ನು ಬಿಡುಗಡೆ ಮಾಡಲಿದ್ದು, ಮಹಿಳೆಯರಿಗಾಗಿ ಮಹಿಳೆಯರೇ ನಡೆಸುವ ರಾಪಿಡೋ ಸೇವೆ ಇದಾಗಿದೆ. ಈ ವಿಚಾರವನ್ನು ಕಂಪನಿಯ ಸಹ-ಸಂಸ್ಥಾಪಕ ಪವನ್ ಗುಂಟುಪಲ್ಲಿ ಬಹಿರಂಗಪಡಿಸಿದ್ದಾರೆ. 

ಕರ್ನಾಟಕದಲ್ಲಿ ನಾವು ಈ ವರ್ಷ ಮಹಿಳೆಯರಿಗಾಗಿ ಮಹಿಳೆಯರೇ ನಡೆಸುವ ಬೈಕ್ ಟ್ಯಾಕ್ಸಿಗಳಾದ ರಾಪಿಡೋದ ಪಿಂಕ್ ಬೈಕ್ ಅನ್ನು ಪರಿಚಯಿಸಲಿದ್ದೇವೆ. ಇದು ಸುಮಾರು 25,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ" ಎಂದು ಗುಂಟುಪಲ್ಲಿ ಹೇಳಿದ್ದಾರೆ. ಅಂದಹಾಗ್ ಸೆಪ್ಟೆಂಬರ್ 2024 ರಲ್ಲಿ, ರಾಪಿಡೊ ಚೆನ್ನೈನಲ್ಲಿ ಬೈಕ್ ಪಿಂಕ್ ಅನ್ನು ಅನಾವರಣ ಮಾಡಿತ್ತು.

ರಾಪಿಡೊ ಬೈಕ್‌ಗಳಲ್ಲಿ ಮಹಿಳಾ ಕ್ಯಾಪ್ಟನ್‌ಗಳನ್ನು ಪರಿಚಯಿಸುವ ಮೂಲಕ ಮಹಿಳೆಯರಿಗೆ 25,000 ಉದ್ಯೋಗಾವಕಾಶಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಒಬ್ಬ ಮಹಿಳೆ ಅಪರಿಚಿತ ಚಾಲಕನೊಂದಿಗೆ ಸುರಕ್ಷಿತವಾಗಿ ಪ್ರಯಾಣಿಸಲು ಸಾಧ್ಯವಾದರೆ, ತನ್ನ ತಲುಪಬೇಕಾದಸ್ಥಾನವನ್ನು ಸುಲಭವಾಗಿ ತಲುಪಲು ಸಾಧ್ಯವಾದರೆ, ಅದನ್ನೇ ನಮ್ಮ ಯಶಸ್ಸು ಎಂದು ಪರಿಗಣಿಸಬಹುದು" ಎಂದು ಗುಂಟುಪಲ್ಲಿ ಹೇಳಿದ್ದಾರೆ.

ರಾಪಿಡೋ ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ ಮಹಿಳಾ ಕ್ಯಾಪ್ಟನ್‌ಗಳಿಗೆ ಆರಂಭಿಕ ಹಂತದಲ್ಲಿ 25 ಎಲೆಕ್ಟ್ರಿಕ್ ಬೈಕ್‌ಗಳನ್ನು ಒದಗಿಸುವ ಮೂಲಕ ಸಾರಿಗೆ ಮತ್ತು ಆದಾಯದ ಅವಕಾಶಗಳನ್ನು ಸುಲಭಗೊಳಿಸುವ ಭರವಸೆ ನೀಡಿದೆ. ಅಲ್ಲದೆ, ವಿವಿಧ ಎನ್‌ಜಿಒಗಳ ಸಹಯೋಗದೊಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಮಹಿಳಾ ಕ್ಯಾಪ್ಟನ್‌ಗಳಿಗೆ ಸುರಕ್ಷತೆ ಮತ್ತು ಚಾಲನಾ ಕೌಶಲ್ಯಗಳ ಬಗ್ಗೆ ತರಬೇತಿ ನೀಡಲು ರಾಪಿಡೋ ಮುಂದಾಗಿದೆ. ಇದಲ್ಲದೆ, ಕೋಲ್ಕತ್ತಾದಲ್ಲಿ ಎಲೆಕ್ಟ್ರಿಕ್ ಬೈಕ್ ಪಿಂಕ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸುವುದಾಗಿ ಕಂಪನಿ ಘೋಷಿಸಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow