ಜಸ್ಪ್ರೀತ್ ಬುಮ್ರಾ ಶೀಘ್ರದಲ್ಲೇ ಟೆಸ್ಟ್ ಕ್ರಿಕೆಟ್ ನಿವೃತ್ತಿ..? ಮಾಜಿ ಕ್ರಿಕೆಟಿಗನ ಶಾಕಿಂಗ್ ಕಾಮೆಂಟ್

ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗುವ ಸಾಧ್ಯತೆ ಇದೆ ಎಂಬ ಶಾಕ್ ಹೇಳಿಕೆಯನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ನೀಡಿದ್ದಾರೆ. ಲಾರ್ಡ್ಸ್ ಟೆಸ್ಟ್ನಲ್ಲಿ 7 ವಿಕೆಟ್ ಪಡೆದಿದ್ದ ಬುಮ್ರಾ,
ಮ್ಯಾಂಚೆಸ್ಟರ್ ಟೆಸ್ಟ್ನಲ್ಲಿ ತನ್ನ ಸಾಮರ್ಥ್ಯ ತೋರಲು ವಿಫಲರಾದ ಹಿನ್ನೆಲೆ ಈ ಹೇಳಿಕೆ ಬಂದಿದೆ. ಮ್ಯಾಂಚೆಸ್ಟರ್ ಟೆಸ್ಟ್ನಲ್ಲಿ ಕೇವಲ ಒಂದು ವಿಕೆಟ್ ಪಡೆದ ಬುಮ್ರಾ, ಸಂಪೂರ್ಣವಾಗಿ ಲಯ ತಪ್ಪಿದಂತಿದ್ದು, ಬೌಲಿಂಗ್ನಲ್ಲೂ ತನ್ನ ವೇಗ ತೋರಲಾಗದ ಸ್ಥಿತಿಯಲ್ಲಿ ಇದ್ದರು. ಇದರಿಂದಾಗಿ, ಅವರ ಫಿಟ್ನೆಸ್ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಬುಮ್ರಾ ಶೀಘ್ರದಲ್ಲೇ ಟೆಸ್ಟ್ ಕ್ರಿಕೆಟ್ನಿಂದ ಹಿಂದೆ ಸರಿಯಬಹುದು. ಅವರು ತಮ್ಮ ದೇಹದಿಂದ ಹಿಡಿದು ವೇಗದ ಬೌಲಿಂಗ್ವರೆಗೆ ಎಲ್ಲವನ್ನೂ ಕಳೆದುಕೊಂಡಂತಿದ್ದಾರೆ," ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ. “ಬುಮ್ರಾ ಸ್ವಾಭಿಮಾನಿ ಆಟಗಾರ. 100% ನೀಡಲಾಗದ ಪರಿಸ್ಥಿತಿಯಲ್ಲಿ, ಅವರು ಆಟವನ್ನೇ ನಿಲ್ಲಿಸಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬುಮ್ರಾ ಇನ್ನೂ ದೇಶಕ್ಕಾಗಿ ಆಡಬೇಕೆಂಬ ಉತ್ಸಾಹ ಹೊಂದಿದ್ದರೂ, ಅವರ ದೇಹ ಸಹಕರಿಸುತ್ತಿಲ್ಲ ಎನ್ನುವುದು ಕೈಫ್ ಅಭಿಪ್ರಾಯ. ಅವರ ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳಿಂದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






