ಉತ್ತಮ ಪ್ರದರ್ಶನ ನೀಡಿದ್ರಷ್ಟೇ ಕೊಹ್ಲಿ, ರೋಹಿತ್ ಟೀಂ ಇಂಡಿಯಾದಲ್ಲಿ ಉಳಿಯಲು ಸಾಧ್ಯ!

ಅಕ್ಟೋಬರ್ 7, 2025 - 09:04
 0  10
ಉತ್ತಮ ಪ್ರದರ್ಶನ ನೀಡಿದ್ರಷ್ಟೇ ಕೊಹ್ಲಿ, ರೋಹಿತ್ ಟೀಂ ಇಂಡಿಯಾದಲ್ಲಿ ಉಳಿಯಲು ಸಾಧ್ಯ!

ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡ ಪ್ರಕಟವಾಗಿದೆ. ರೋಹಿತ್ ಶರ್ಮಾಗೆ ನಾಯಕತ್ವ ನೀಡದೇ ಇರುವುದು ಅಭಿಮಾನಿಗಳಿಗೆ ಆಶ್ಚರ್ಯ ಮತ್ತು ಆತಂಕ ಉಂಟುಮಾಡಿದೆ. 2027 ಏಕದಿನ ವಿಶ್ವಕಪ್ ದೃಷ್ಟಿಯಿಂದ ಸೆಲೆಕ್ಷನ್ ಕಮಿಟಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಭವಿಷ್ಯ ಅತಂತ್ರದಲ್ಲಿದೆ ಎಂಬ ಸಂದೇಶ ನೀಡಲಾಗಿದೆ.

ಬಿಸಿಸಿಐ, ಆಸ್ಟ್ರೇಲಿಯಾ ಸರಣಿ ನಂತರ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡದೇ ತಂಡದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಸೂಚಿಸಿದ್ದು, ಪರೋಕ್ಷವಾಗಿ ರನ್ ಗಳಿಸಿದರಷ್ಟೇ ಟೀಮ್ ಇಂಡಿಯಾದಲ್ಲಿ ಸ್ಥಾನ ಖಚಿತ ಎಂದು ಎಚ್ಚರಿಕೆ ನೀಡಲಾಗಿದೆ. 36 ವರ್ಷದ ವಿರಾಟ್ ಕೊಹ್ಲಿ ಮತ್ತು 38 ವರ್ಷದ ರೋಹಿತ್ ಶರ್ಮಾ 2027 ವಿಶ್ವಕಪ್ ವೇಳೆಗೆ 40 ವರ್ಷದ ಹಾದಿಯಲ್ಲಿರುವುದರಿಂದ, ಬಿಸಿಸಿಐ ಹೊಸ ತಂಡ ರೂಪಿಸಲು ಮುಂದಾಗಿದೆ.

ಅಕ್ಟೋಬರ್ 19ರಿಂದ ಆರಂಭವಾಗುವ ಏಕದಿನ ಸರಣಿಯಲ್ಲಿ ಇಬ್ಬರೂ ಇಂಪ್ಯಾಕ್ಟ್ ಫುಲ್ ಪರ್ಫಾರ್ಮೆನ್ಸ್ ನೀಡಲೇಬೇಕಾಗಿದೆ. ಅಜಿತ್ ಅಗರ್ಕರ್ ಹೇಳಿದಂತೆ, ಇಲ್ಲವಾದರೆ ಆಸ್ಟ್ರೇಲಿಯಾ ಪ್ರವಾಸದ ಸರಣಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಭವಿಷ್ಯದ ಕೊನೆಯ ಅವಕಾಶವಾಗಬಹುದು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow