ಬಸವೇಶ್ವರರ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡುವ ಸಿಎಂ ನಿರ್ಧಾರ ಸ್ವಾಗತ; ಬಿವೈ ವಿಜಯೇಂದ್ರ
ಬೆಂಗಳೂರು:- ಬಸವೇಶ್ವರರ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡುವುದನ್ನು ಸ್ವಾಗತಿಸುತ್ತೇವೆ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಎಲ್ಲಾ ಸಮಾಜ, ಧರ್ಮಗಳನ್ನು ರಕ್ಷಿಸುವ ಆದ್ಯ ಕರ್ತವ್ಯ ಮುಖ್ಯಮಂತ್ರಿಗಳಿಗೆ ಇರಬೇಕಾಗುತ್ತದೆ. ಬಸವೇಶ್ವರರ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡುವುದನ್ನು ಸ್ವಾಗತಿಸುತ್ತೇವೆ. ಆದರೆ, ಸಿದ್ದರಾಮಯ್ಯನವರ ಅಂತರಂಗದಲ್ಲಿ ಏನಿದೆ ಎಂಬುದನ್ನು ಬಹಿರಂಗ ಪಡಿಸಬೇಕೆಂದು ಎಂದರು.
ಬಹಿರಂಗವಾಗಿ ಹೇಳುವುದು ಬೇರೆ, ಮುಖ್ಯಮಂತ್ರಿಗಳ ಅಂತರಂಗದ ಅಪೇಕ್ಷೆ ಏನೆಂಬುದನ್ನು ಅವರು ಬಹಿರಂಗಪಡಿಸಬೇಕಿದೆ ಎಂದು ಹೇಳಿದರು. ಪ್ರತ್ಯೇಕ ಧರ್ಮದ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಇದನ್ನು ಪತ್ರಿಕೆಗಳಲ್ಲಿ ಗಮನಿಸಿದ್ದೇನೆ. ವೀರಶೈವ ಲಿಂಗಾಯತ ಅಥವಾ ಲಿಂಗಾಯತ ಧರ್ಮದ ಕೂಗು ಇವತ್ತು ಮುನ್ನೆಲೆಗೆ ಬಂದಿದ್ದು, ಅದರ ಹಿನ್ನೆಲೆಯಲ್ಲಿ ಇದ್ದು ಮಾತನಾಡುವವರು ಯಾರೆಂಬ ಅರಿವು ಸಮಾಜಕ್ಕೆ ಇದೆ ಎಂದು ತಿಳಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?