ಏನಿದು ಹೊಸ ಟ್ವಿಸ್ಟ್! ಕರ್ಣನ ತಂದೆ ರಮೇಶ್ ಮುಖವಾಡ ಕಳಚಿಬಿತ್ತು; ದೊಡ್ಡ ಸಂಚು ಬಯಲು!
ಜನಪ್ರಿಯ ಧಾರಾವಾಹಿ ‘ಕರ್ಣ’ ಹೊಸ ಟ್ವಿಸ್ಟ್ ಗಳು ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಇತ್ತೀಚಿನ ಎಪಿಸೋಡ್‌ನಲ್ಲಿ ಕರ್ಣನ ತಂದೆ ರಮೇಶ್ ಒಳ್ಳೆಯವನಾಗಿ ಬದಲಾಗಿದ್ದಂತೆ ತೋರಿಸಲಾಗಿತ್ತು. ಆದರೆ, ಇದೀಗ ಅವನ ನಿಜವಾದ ಮುಖವಾಡ ಬಯಲಾಗಿದ್ದು, ಧಾರಾವಾಹಿಗೆ ಅಚ್ಚರಿ ಟ್ವಿಸ್ಟ್ ಬಂದಿದೆ.
ಮೊದಲು ಕೆಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಮೇಶ್, ನಂತರ ಒಳ್ಳೆಯವನಾಗಿ ವರ್ತಿಸುತ್ತಿದ್ದ. ಈ ಬದಲಾವಣೆ ಕರ್ಣನಿಗೆ ಸಂತೋಷ ತಂದಿದ್ದರೂ, ರಮೇಶ್ ಮತ್ತೆ ಕರ್ಣನಿಗೆ ಮೋಸ ಮಾಡಲು ಮುಂದಾಗಿದ್ದಾನೆ ಎಂಬ ಸತ್ಯ ಹೊರಬಂದಿದೆ. ಈ ವಿಷಯವನ್ನು ರಮೇಶ್ ತನ್ನ ಮಗ ಸಂಜಯ್ ಜೊತೆ ಹಂಚಿಕೊಂಡಿದ್ದಾನೆ. ಅದನ್ನು ಕರ್ಣನ ತಾಯಿ ಕದ್ದು ಕೇಳಿ, ಕರ್ಣನಿಗೆ ತಿಳಿಸಿದ್ದಾಳೆ.
ಇದೇ ವೇಳೆ, ಕರ್ಣ ಮತ್ತು ನಿಧಿ ಪ್ರೀತಿ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇಬ್ಬರ ಮದುವೆಯನ್ನು ನಾನೇ ಮಾಡಿಸುತ್ತೇನೆ ಎಂದು ರಮೇಶ್ ಪ್ರಾಮಿಸ್ ಮಾಡಿದ್ದರೂ, ಈಗ ಆತ ನಿತ್ಯಾ ಮದುವೆಗೆ ಒಪ್ಪಿಕೊಂಡಿದ್ದಾನೆ.
ಇದರಿಂದ ಧಾರಾವಾಹಿಯಲ್ಲಿ ಹೊಸ ಕುತೂಹಲ ಹುಟ್ಟಿದೆ. ಇತ್ತೀಚೆಗೆ ಬಿಡುಗಡೆಯಾದ ಪ್ರೋಮೋದಲ್ಲಿ ಕರ್ಣ–ನಿತ್ಯಾ ಮದುವೆ ದೃಶ್ಯ ತೋರಿಸಲಾಗಿ, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ಈ ವಾರ ಪೂರ್ತಿ ಧಾರಾವಾಹಿಯಲ್ಲಿ ಮದುವೆ ಸಂಭ್ರಮ ನಡೆಯಲಿದ್ದು, ಮುಂದಿನ ಎಪಿಸೋಡ್‌ಗಳಲ್ಲಿ ಕರ್ಣ ನಿತ್ಯಾನ ಮದುವೆಯಾಗುತ್ತಾನೋ ಅಥವಾ ನಿಧಿಯನ್ನೇ ಆರಿಸುತ್ತಾನೆಯೇ ಎನ್ನುವುದು ಪ್ರೇಕ್ಷಕರ ಕುತೂಹಲದ ವಿಷಯವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?