18ರ ಯುವತಿ- 50ರ ವ್ಯಕ್ತಿ ಮದ್ವೆಗೆ ಬಿಗ್ ಟ್ವಿಸ್ಟ್.! ಅಂಕಲ್ ಅರೆಸ್ಟ್!

ಹುಬ್ಬಳ್ಳಿ: 18 ವರ್ಷದ ಯುವತಿ ಹಾಗೂ 50 ವರ್ಷ ವ್ಯಕ್ತಿ ಮದುವೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮದುವೆಯಾಗಿ ಎರಡು ಮಕ್ಕಳಿದ್ದರೂ 18 ವರ್ಷದ ಯುವತಿಯನ್ನು ಮದುವೆಯಾಗಿದ್ದು, ದೇವಸ್ಥಾನದಲ್ಲಿ ಯುವತಿಗೆ ತಾಳಿ ಕಟ್ಟಿದ ಫೋಟೋ ಹಾಕಿಕೊಂಡಿದ್ದ. ಇದೀಗ ಯುವತಿ ವರಸೆ ಬದಲಿಸಿದ್ದು, ಅಂಕಲ್ಗೆ ಸಂಕಷ್ಟ ಎದುರಾಗಿದೆ.
ಹೌದು 8 ವಯಸ್ಸಿನ ಯುವತಿ ಜೊತೆ ಮದುವೆಯಾದ್ದ 50 ವರ್ಷದ ಪ್ರಕಾಶ್ನನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯಿಂದ ನಾಪತ್ತೆಯಾಗಿದ್ದ ಹುಬ್ಬಳ್ಳಿಯ ಕರೀಷ್ಮಾ, 50 ವರ್ಷದ ಸೆಕ್ಯೂರಿಟಿ ಪ್ರಕಾಶ್ ಎನ್ನುವಾತನ ಜೊತೆ ಪತ್ತೆಯಾಗಿದ್ದಳು. ಅಲ್ಲದೇ ಇಬ್ಬರು ಮದುವೆಯಾಗಿದ್ದರು. ಆದ್ರೆ, ಅದೇನಾಯ್ತೋ ಏನೋ ಕರೀಷ್ಮಾ ಪ್ರಕಾಶನನ್ನು ಬಿಟ್ಟು ವಾಪಸ್ ಮನೆಗೆ ಓಡಿ ಬಂದಿದ್ದಾಳೆ.
ಅಲ್ಲದೇ ಬಲವಂತವಾಗಿ ನನ್ನ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ ಎಂದು ಪ್ರಕಾಶನ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಅಲ್ಲದೇ ಈ ಸಂಬಂಧ ಕರೀಷ್ಮಾ ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಒಂದು ವರ್ಷದ ಹಿಂದೆಯೂ ನನಗೆ ಪ್ರಕಾಶ್ ಪೀಡಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದೀಗ ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕಾಶನನ್ನು ಬಂಧಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






