Muda Case : ಮುಡಾ ಕೇಸ್’ನಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್..! ಸ್ನೇಹಮಯಿ ಕೃಷ್ಣಗೆ ನೋಟಿಸ್

ಫೆಬ್ರವರಿ 19, 2025 - 17:00
 0  25
Muda Case : ಮುಡಾ ಕೇಸ್’ನಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್..! ಸ್ನೇಹಮಯಿ ಕೃಷ್ಣಗೆ ನೋಟಿಸ್

ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ವಿರುದ್ಧ ಮುಡಾ ಹಗರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಈ ಹಗರಣದ ತನಿಖೆ ನಡೆಸಿದ ಮೈಸೂರು ಲೋಕಾಯುಕ್ತ ಅಧಿಕಾರಿಗಳು ವರದಿ ಸಿದ್ಧಪಡಿಸಿದ್ದು, ವರದಿಯಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಕ್ಲೀನ್​ಚಿಟ್ ನೀಡಿದೆ. 

ಹೌದು ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾವರ್ತಿ, ಬಾಮೈದ ಮಲ್ಲಿಕಾರ್ಜುನ್, ಜಮೀನು ಮಾಲೀಕ ದೇವರಾಜುಗೆ ಕ್ಲೀನ್‌ಚಿಟ್‌ ನೀಡಲಾಗಿದೆ.

ಇನ್ನು ನೋಟಿಸ್‌‌ನಲ್ಲಿ ಸಾಕಷ್ಟು ಸಾಕ್ಷ್ಯಾಧಾರ ಗಳ ಕೊರತೆ ಎಂದು ಹೇಳಿದ್ದು, ಎಲ್ಲ ಆರೋಪಿಗಳ ಆರೋಪಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ಸಾಬೀತಾಗಿಲ್ಲ ಎಂದು ಹೇಳಿದೆ. ಇನ್ನು ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗುತ್ತಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣಗೆ ನೋಟಿಸ್ ನೀಡಿದ್ದು, ನೋಟಿಸ್ ತಲುಪಿದ ಒಂದು ವಾರದೊಳಗೆ ವಿರೋಧವಿದ್ದರೆ ನ್ಯಾಯಾಧೀಶರಿಗೆ ತಿಳಿಸಿ ಎಂದು ಹೇಳಲಾಗಿದೆ.

ಮುಡಾ ತನಿಖೆಯಲ್ಲಿ ಸಾಕ್ಷ್ಯಾಧಾರಗಳ ಕೊರತೆ ಎಂದು ಸ್ನೇಹಮಯಿ ಕೃಷ್ಣಗೆ ಲೋಕಾಯುಕ್ತ ನೋಟಿಸ್ ನೀಡಿದೆ. ಲೋಕಾಯುಕ್ತ ಎಸ್ಪಿ ಉದೇಶ್‌ ಅವರು, ಸ್ನೇಹಮಯಿ ಕೃಷ್ಣ ಅವರಿಗೆ ನೋಟಿಸ್‌ ನೀಡಿದ್ದು, ಇದರಲ್ಲಿ ನೀವು ನೀಡಿದ ದೂರು ಸಂಬಂಧ A1 ಆರೋಪಿಯಿಂದ A 4 ಆರೋಪಿವರೆಗೆ ವಿಚಾರಣೆ ನಡೆಸಲಾಗಿದೆ. ಇದು ಸಿವಿಲ್ ಸ್ವರೂಪ್ಪದ್ದೂ, ತನಿಕೆ ನಡೆಸಲು ತಕ್ಕುದಲ್ಲ , ಕಾನೂನಿನ ತಪ್ಪು ತಿಳುವಳಿಕೆಯೆಂದು, ಅಲ್ಲದೆ ದೂರಿನಲ್ಲಿ ವಜಾ ಮಾಡಿದ ಪ್ರಕರಣಗಳು ಸಹ ಇದೆ. ಅಲ್ಲದೆ ಸಾಕಷ್ಟು ಸಾಕ್ಷ್ಯಾಧಾರ ಗಳ ಕೊರೆತೆ ಎಂದು ಲೋಕಾ ದೂರುದಾರರಿಗೆ ನೋಟಿಸ್ ನೀಡಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow