ಸರಸಕ್ಕೆ ಕರೆದು ಪ್ರಿಯಕರನ ಮರ್ಮಾಂಗಕ್ಕೇ ಕತ್ತರಿ ಹಾಕಿದ ಪ್ರಿಯತಮೆ! ಮುಂದೇನಾಯ್ತು..?

ಪ್ರಿಯತಮೆಯೇ ತನ್ನ ಪ್ರಿಯತಮನ ಮರ್ಮಾಂಗವನ್ನು ಕತ್ತರಿಸಿಸುವ ಘಟನೆ ದೆಹಲಿಯ ಹೊರವಲಯದ ಮಂಗಳಪುರಿಯಲ್ಲಿ ನಡೆದಿದೆ. 22 ವರ್ಷದ ಯುವತಿ ಈ ಕೃತ್ಯವನ್ನು ಎಸಗಿದ್ದಾಳೆ. ಕೃತ್ಯ ಎಸಗಿದ ಬಳಿಕ ಯುವತಿ ತನ್ನ ಕುಟುಂಬದ ಸದಸ್ಯರ ಜೊತೆ ಪರಾರಿಯಾಗಿದ್ದಾಳೆ.
35 ವರ್ಷದ ಸಂತ್ರಸ್ತ ಯುವಕನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಆದರೆ ಮರ್ಮಾಂಗವನ್ನು ಜೋಡಿಸುವ ಪ್ರಯತ್ನ ಯಶಸ್ವಿಯಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಬೀದಿ ವ್ಯಾಪಾರಿಯಾಗಿರುವ ಯುವಕನನ್ನು ರಾತ್ರಿ ಯುವತಿ ತನ್ನ ಮನೆಗೆ ಕರೆದಿದ್ದಾಳೆ. ಮನೆಗೆ ಬಂದ ಯುವಕನ ಜೊತೆ ಮದುವೆಯಾಗುವಂತೆ ಒತ್ತಡ ಹೇರಿದ್ದಾಳೆ. ಮದುವೆಯನ್ನು ನಿರಾಕರಿಸಿದ್ದಕ್ಕೆ ಯುವತಿ ಯುವಕನ್ನು ಬಾತ್ ರೂಮ್ನಲ್ಲಿ ಕೂಡಿ ಹಾಕಿ ವಿವಸ್ತ್ರಗೊಳಿಸಿ ಬಲವಂತವಾಗಿ ಸೆಕ್ಸ್ ಮಾಡುವಂತೆ ಒತ್ತಡ ಹಾಕಿದ್ದಾಳೆ.
ತನ್ನ ಬೇಡಿಕೆಯನ್ನು ಯುವಕ ತಿರಸ್ಕರಿಸಿದ್ದಕ್ಕೆ ಆಡುಗೆ ಕೋಣೆಗೆ ಹೋಗಿ ಯುವತಿ ಹರಿತವಾದ ಚೂರಿಯನ್ನು ತಂದು, ನನ್ನ ಜೊತೆ ಸೆಕ್ಸ್ ಮಾಡದೇ ಇದ್ದರೆ ನಿನ್ನನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ಬಳಿಕ ಅದೇ ಚೂರಿಯಿಂದ ಮರ್ಮಾಂಗವನ್ನು ಕತ್ತರಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಯುವತಿಯ ಸಹೋದರ ಮತ್ತು ಆತನ ಪತ್ನಿಯು ಮನೆಯಲ್ಲಿದ್ದರು. ಅವರು ಪ್ರಿಯತಮನಿಗೆ ಪಾಠ ಕಲಿಸುವಂತೆ ಆಕೆಗೆ ಪ್ರಚೋದನೆ ನೀಡುತ್ತಿದ್ದರು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






