ಲವ್ಲಿ ಸ್ಟಾರ್ ಪ್ರೇಮ್ʼಗೆ ನಾಯಕಿಯಾಗಿ ಶರಣ್ಯಾ ಶೆಟ್ಟಿ ಆಯ್ಕೆ..!

ಶರಣ್ಯ ಶೆಟ್ಟಿ ಅವರು ಸೀರಿಯಲ್ ಮೂಲಕ ಪರಿಚಿತರಾದರು. ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಹೌದು, ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಗಟ್ಟಿಮೇಳ' ಸಿನಿಮಾದಲ್ಲಿ ಸಾಹಿತ್ಯ ಅನ್ನುವ ಪಾತ್ರದಲ್ಲಿ ನಟಿಸುತ್ತಿದ್ದರು. ಇದೇ ಧಾರಾವಾಹಿ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದೇ ಗ್ಯಾಪ್‌ನಲ್ಲಿ ಸಿನಿಮಾಗಳಲ್ಲೂ ನಟಿಸಿದ್ದಾರೆ.
'1980' ಇವರ ಮೊದಲ ಸಿನಿಮಾ. ಆ ಬಳಿಕ 'ಪೆಂಟಗಾನ್', 'ಸ್ಪೂಕಿ ಕಾಲೇಜ್','ಹುಟ್ಟು ಹಬ್ಬದ ಶುಭಾಶಯಗಳು' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದೀಗ ಕನ್ನಡದ ಮತ್ತೊಂದು ಬಿಗ್ ಪ್ರಾಜೆಕ್ಟ್‌ಗೆ ಕುಡ್ಲದ ಬೆಡಗಿ ಶರಣ್ಯಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್‌ಗೆ ಹೊಸ ಸಿನಿಮಾಗೆ ಶರಣ್ಯಾ ಹೀರೋಯಿನ್ ಆಗಿದ್ದಾರೆ. ನೆನಪಿರಲಿ ಪ್ರೇಮ್ ನಟಿಸುತ್ತಿರುವ ಹೊಸ ಚಿತ್ರಕ್ಕೆ ಶರಣ್ಯಾ ಸೆಲೆಕ್ಟ್ ಆಗಿದ್ದು, ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪವರ್‌ಫುಲ್ ಪಾತ್ರದಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರವನ್ನು ತೇಜಲ್ ಎನ್ನುವವರು ನಿರ್ದೇಶನ ಮಾಡಿದ್ದಾರೆ. ಇನ್ನೂ ಈ ಸಿನಿಮಾದ ಜೊತೆಗೆ ತೆಲುಗಿನಲ್ಲಿ ಚಿತ್ರವೊಂದಕ್ಕೆ ಶರಣ್ಯಾ ಆಯ್ಕೆಯಾಗಿದ್ದಾರೆ. ಇಬ್ಬರೂ ಸ್ಟಾರ್ ನಟರಿರುವ ಸಿನಿಮಾ ಅವರು ನಾಯಕಿಯಾಗಿದ್ದು, ಈ ಚಿತ್ರದ ಕುರಿತು ಮತ್ತಷ್ಟು ವಿವರ ಇನ್ನೂ ರಿವೀಲ್ ಆಗಬೇಕಿದೆ.
ಇನ್ನೂ ‘ಗಟ್ಟಿಮೇಳ’ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಹೆಸರು ಮಾಡಿದ್ದ ಚೆಲುವೆ ಆ ನಂತರ 1980, ನಗುವಿನ ಹೂಗಳೇ, ಫಾರೆಸ್ಟ್ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೊತೆಯಾಗಿ ನಟಿಸಿ ಸೈ ಎನಿಸಿಕೊಂಡರು. ಈ ಚಿತ್ರ ಅವರಿಗೆ ಬಿಗ್ ಬ್ರೇಕ್ ಕೊಟ್ಟಿದೆ.
ನಿಮ್ಮ ಪ್ರತಿಕ್ರಿಯೆ ಏನು?






