ಜಿಲ್ಲಾಧಿಕಾರಿಯಾಗಿ ಪುಟ್ಟಕ್ಕನ ಆಸೆ ಈಡೇರಿಸಿದ ಸ್ನೇಹ: ಪತ್ನಿಗೆ ಸಾಥ್ ಕೊಟ್ಟ ಕಂಠಿಗೆ ವೀಕ್ಷಕರ ಮೆಚ್ಚುಗೆ!

ಶುರುವಾದ ದಿನದಿಂದ ಹಿಡಿದು ಇಲ್ಲಿಯವರೆಗೂ ಮೊದಲ ಸ್ಥಾನದಲ್ಲೇ ಇದೆ ಪುಟ್ಟಕ್ಕನ ಮಕ್ಕಳು ಸೀರಿಯಲ್. ಯಾರೂ ಊಹಿಸಲಾರದ ರೀತಿಯಲ್ಲಿ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ ಪುಟ್ಟಕ್ಕನ ಮಕ್ಕಳು ಸೀರಿಯಲ್. ಇದೀಗ ಚಿಕ್ಕ ಮನಸಿನಲ್ಲಿ ಅಂದುಕೊಂಡಿದ್ದ ಆಸೆಯನ್ನು ಅದರಲ್ಲೂ ಪುಟ್ಟಕ್ಕನ ಆಸೆಯನ್ನು ಎರಡನೇ ಮಗಳು ಸ್ನೇಹ ಈಡೇರಿಸಿದ್ದಾಳೆ. 5ನೇ ವಯಸ್ಸಿನಲ್ಲಿದ್ದಾಗಲೇ ನಾನು ಜಿಲ್ಲಾಧಿಕಾರಿ ಆಗಬೇಕು ನಮ್ಮ ಊರಿಗೆ ನಾನು ಮಾದರಿಯಾಗಬೇಕು ಅಂತ ಛಲ ತೊಟ್ಟು ನಿಂತಿದ್ದಳು ಸ್ನೇಹ. ಕೊನೆಗೂ ತನ್ನ ಹಾಗೂ ತಾಯಿಯ ಆಸೆಯನ್ನು ಈಡೇರಿಸಿ ಜಿಲ್ಲಾಧಿಕಾರಿಯಾಗಿ ಎಲ್ಲರಿಗೂ ಮಾದರಿಯಾಗಿದ್ದಾಳೆ.
ತಾಯಿಯ ಆಸೆಯನ್ನು ಪೂರ್ತಿ ಮಾಡಿದ ಸ್ನೇಹಾಳಿಗೆ ವೀಕ್ಷಕರಿಂದ ಶುಭಾಶಯ ಮಹಾಪೂರವೇ ಹರಿದು ಬರುತ್ತಿವೆ. ಜೊತೆಗೆ ಪತ್ನಿಗೆ ಸಾಥ್ ಕೊಟ್ಟ ಕಂಠಿಗೂ ಕೂಡ ವೀಕ್ಷಕರು ಜೈ ಎನ್ನುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪುಟ್ಟಕ್ಕ ಅನ್ನೋ ಕಥೆಯಲ್ಲಿ ಈಗ ಒಂದು ಅರ್ಥ ಬಂತು, ಪುಟ್ಟಕ್ಕನ ಸಂಭ್ರಮ ನೋಡುವುದೇ ಒಂದು ರೀತಿ ಚೆಂದ, ಕೊನೆಗೂ ಸ್ನೇಹ ಚಿಕ್ಕ ವಯಸ್ಸಿನ ಕನಸನ್ನು ನನಸು ಮಾಡ್ಕೊಂಡು ಡಿಸಿ ಆಗಿಬಿಟ್ಟಿದ್ದಾಳೆ, ಎಲ್ಲ ತಂದೆ ತಾಯಿ ಕನಸು ಇದೆ ಅಲ್ವಾ ಅಂತ ಕಾಮೆಂಟ್ಸ್ ಹಾಕಿದ್ದಾರೆ.
ಜೈಲಿನಿಂದ ಹೊರಬರುತ್ತಿರೋ ಸಿಂಗಾರಮ್ಮ, ಬಂಗಾರಮ್ಮ ಆಗಿ ಮನೆಗೆ ಕಾಲಿಟ್ಟಿದ್ದಾಳೆ. ಸ್ನೇಹಾಳ ಮನೆಗೆ ಬಂದಿದ್ದು, ಸಿಂಗಾರಮ್ಮ ಅಂತ ಸಹನಾಗೆ ಗೊತ್ತಾಗಿದೆ. ಹೇಗಾದರೂ ಮಾಡಿ ನಿಮ್ಮ ಮನೆಯಲ್ಲಿ ಇದ್ದಿದ್ದು ಬಂಗಾರಮ್ಮ ಅಲ್ಲ ಸಿಂಗಾರಮ್ಮ ಅಂತ ಹೇಳೋದಕ್ಕೆ ಸಹನಾ ಒದ್ದಾಡುತ್ತಿದ್ದಾಳೆ. ಜೊತೆಗೆ ಹಳ್ಳಿಯಿಂದ ಪಟ್ಟಣ ಸೇರಿರೋ ಸಹನಾ ದುಡಿದು ಜೀವನ ಸಾಗಿಸುತ್ತಿದ್ದಾಳೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






