ಜೀವಕ್ಕೆ ಕುತ್ತು ತರುವ ಹಸಿರು ಬಟಾಣಿ ಬ್ಯಾನ್ ಆಗುತ್ತಾ..!? ವರದಿಯಲ್ಲಿದೆ ಶಾಕಿಂಗ್ ಮಾಹಿತಿ!

ಎಲ್ಲಾ ಕಾಲದಲ್ಲೂ ಜನರ ಫೇವರಿಟ್ ಕುರಕಲು ತಿಂಡಿಯಾಗಿರೋ ಬಟಾಣಿಯೂ ಆರೋಗ್ಯಕ್ಕೆ ಹಾನಿಕಾರಕ ಅನ್ನೋ ಮಾಹಿತಿ ಹೊರಬಂದಿತ್ತು. ಅದೇ ಬಟಾಣಿ ಬ್ಯಾನ್ ಗೆ ಆರೋಗ್ಯ ಇಲಾಖೆ ತಯಾರಿ ನಡೆಸಿದೆ.
ಹೌದು ಹಸಿರು ಬಟಾಣಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದ್ರಲ್ಲೂ ಕರಿದ ಹಸಿರು ಬಟಾಣಿಯಂತೂ ಎಲ್ಲರ ಫೇವರೇಟ್. ಮದ್ಯಪ್ರಿಯರಿಗೆ ಬಟಾಣಿ ಇಲ್ಲದೇ ಎಣ್ಣೆ ಒಳಗೆ ಇಳಿಯೋದೇ ಇಲ್ಲ ಎಂಬ ಮಾತಿದೆ. ಆದ್ರೆ ರಾಜ್ಯದಲ್ಲಿ ಗೋಬಿ, ಪಾನಿಪುರಿ ಆಯ್ತು...ಇದೀಗ ಹಸಿರು ಬಟಾಣಿ ಸರದಿ. ಜನರ ಫೇವರೆಟ್ ಕರಿದ ಹಸಿರು ಬಟಾಣಿ ಬ್ಯಾನ್ ಆಗುತ್ತಾ? ಅಷ್ಟಕ್ಕೂ ಬಟಾಣಿಯಲ್ಲಿ ಬ್ಯಾನ್ ಆಗುವಂತ ಅಂಶ ಏನಿದೆ? ಬಟಾಣಿಯಲ್ಲಿ ಕೃತಕ ಕಲಬೆರಕೆ ಅಂಶ ಪತ್ತೆಯಾಗಿದೆ.
ಪ್ರಾಥಮಿಕ ಲ್ಯಾಬ್ ವರದಿಯಲ್ಲಿ ಸ್ಫೋಟಕ ಅಂಶ ಬಯಲಾಗಿದ್ದು, ಬ್ರಿಲಿಯಂಟ್ ಬ್ಲೂ, ಟೆಟಾರ್ಜಿನ್ ಅಂದ್ರೆ ಹಳದಿ ಬಣ್ಣವಿರುವ ರಾಸಾಯನಿಕ ಇರುವುದು ಪತ್ತೆಯಾಗಿದೆ. ಬಟಾಣಿಯಲ್ಲೂ ಕ್ಯಾನ್ಸರ್ ತರುವ ಅಂಶ ಬೆಳಕಿಗೆ ಬಂದಿದೆ. ಈಗಾಗಲೇ ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ಕಲರ್ ಬಳಕೆ ನಿಷೇಧದ ಬಗ್ಗೆ ಶಿಫಾರಸು ಮಾಡಿದ್ದಾರೆ. ಆದ್ರೆ, ಮತ್ತೊಂದು ಸುತ್ತಿನ ಪರೀಕ್ಷೆ ಬಳಿಕ ಬಟಾಣಿಗೆ ಬಣ್ಣ ಬಳಕೆ ಬ್ಯಾನ್ಗೆ ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ ಕರಿದ ಬಟಾಣಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ್ರೂ, ಬೆಂಗಳೂರಲ್ಲಿ ಮಾತ್ರ ಕಲರ್ಫುಲ್ ಬಟಾಣಿ ಮಾರಾಟ ಮಾತ್ರ ನಿಂತಿಲ್ಲ.
ನಿಮ್ಮ ಪ್ರತಿಕ್ರಿಯೆ ಏನು?






