ಜೈಲಲ್ಲಿ ಇರುವಾಗಲೇ ನಟ ದರ್ಶನ್ ಮನೆಯಲ್ಲಿ ಕಳ್ಳರ ಕೈಚಳಕ: 3 ಲಕ್ಷ ನಗದು ಹೊತ್ತೊಯ್ದ ಖದೀಮರು

ಸೆಪ್ಟೆಂಬರ್ 13, 2025 - 16:03
 0  18
ಜೈಲಲ್ಲಿ ಇರುವಾಗಲೇ ನಟ ದರ್ಶನ್ ಮನೆಯಲ್ಲಿ ಕಳ್ಳರ ಕೈಚಳಕ: 3 ಲಕ್ಷ ನಗದು ಹೊತ್ತೊಯ್ದ ಖದೀಮರು

ಬೆಂಗಳೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಲ್ಲಿ ಇರುವಾಗಲೇ ಕಳ್ಳರು ಕೈಚಳಕ ತೋರಿದ್ದಾರೆ. 3 ಲಕ್ಷ ನಗದು ಹೊತ್ತೊಯ್ದ ಖದೀಮರು ಎಸ್ಕೇಪ್ ಆಗಿದ್ದಾರೆ.

ಪತ್ನಿ ವಿಜಯಲಕ್ಷ್ಮಿ ದರ್ಶನ್‌  ವಾಸವಿರುವ ಹೊಸಕೆರೆಹಳ್ಳಿಯ ಪ್ರೆಸ್ಟಿಜ್ ಅಪಾರ್ಟ್ಮೆಂಟ್‌ನ ಫ್ಲಾಟ್‌ನಲ್ಲಿ ಕಳ್ಳತನವಾಗಿದೆ. ಖತರ್ನಾಕ್‌ ಕಳ್ಳರು ಬೆಡ್‌ರೂಮ್‌ನಲ್ಲಿದ್ದ ಮೂರು ಲಕ್ಷ ನಗದು ಹಣವನ್ನ ಕದ್ದೊಯ್ದಿದ್ದಾರೆ.

ಕಳ್ಳತನ ಸಂಬಂಧ ಮ್ಯಾನೇಜರ್ ನಾಗರಾಜ್ ಮೂಲಕ ವಿಜಯಲಕ್ಷ್ಮಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೆ.4ರಿಂದ ಸೆ.8ರ ನಡುವೆ ಹಣ ಕಳ್ಳತನವಾಗಿದ್ದು, ಮನೆಗೆಲಸದವರ ಮೇಲೆ ಅನುಮಾನವಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow