ಟಾಲಿವುಡ್ ನತ್ತ ಧರ್ಮ ಕೀರ್ತಿರಾಜ್: ಸಿನಿಮಾ ಯಾವುದು? ಯಾರು ಹೀರೋಯಿನ್?

ಕನ್ನಡದ ನವಗ್ರಹ ಸೇರಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ಧರ್ಮ ಕೀರ್ತಿರಾಜ್ ಅವರು ಇದೀಗ ತೆಲುಗು ಸಿನಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಧರ್ಮ ಕೀರ್ತಿರಾಜ್ ಅವರು ಅಪ್ಸರಾ ಜೊತೆ ಪೋಸ್ ಕೊಟ್ಟಿದ್ದಾರೆ. ಧರ್ಮ ಹಾಗೂ ಅಪ್ಸರಾ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ‘ಬ್ಲಡ್ ರೋಸಸ್’ ಎನ್ನುವ ಶೀರ್ಷಿಕೆಯನ್ನು ಚಿತ್ರಕ್ಕೆ ಇಡಲಾಗಿದೆ. ಟೈಟಲ್ ಮೂಲಕವೇ ಸಿನಿಮಾ ಗಮನ ಸೆಳೆದಿದೆ.
ಅಪ್ಸರಾ ರಾಣಿ ಅವರು 2019ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. 2022ರಲ್ಲಿ ರಿಲೀಸ್ ಆದ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಡೇಂಜರಸ್’ ಸಿನಿಮಾದಲ್ಲಿ ಅಪ್ಸರಾ ನಟಿಸಿದರು. ಈ ಚಿತ್ರದಲ್ಲಿ ಅವರಿಗೆ ಭರ್ಜರಿ ಬೋಲ್ಡ್ ಪಾತ್ರ ಸಿಕ್ಕಿತ್ತು. ರಾಮ್ ಗೋಪಾಲ್ ವರ್ಮಾ ಜೊತೆ ಇವರಿಗೆ ಒಳ್ಳೆಯ ಒಡನಾಟ ಇದೆ.
ಅಪ್ಸರಾ ರಾಣಿ ಈಗ ಬೋಲ್ಡ್ ದೃಶ್ಯಗಳನ್ನು ಮಾಡದೇ ಇರಲು ನಿರ್ಧರಿಸಿದಂತೆ ಇದೆ. ಅವರು ಸಾಮಾನ್ಯ ಚಿತ್ರಗಳನ್ನು ಒಪ್ಪಿ ನಟಿಸುತ್ತಾ ಇದ್ದಾರೆ. ಅಪ್ಸರಾ ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಕನ್ನಡದ ಹೀರೋ ಜೊತೆ ಅವರು ಈಗ ತೆಲುಗು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ
ನಿಮ್ಮ ಪ್ರತಿಕ್ರಿಯೆ ಏನು?






