ಡ್ಯಾನ್ಸ್ ಮಾಡುತ್ತಿದ್ದ ಯುವತಿಗೆ ಹೃದಯಾಘಾತ: ಕುಸಿದು ಬಿದ್ದ23 ವರ್ಷದ ಯುವತಿ ಸಾವು

ಫೆಬ್ರವರಿ 11, 2025 - 21:11
ಫೆಬ್ರವರಿ 11, 2025 - 14:17
 0  23
ಡ್ಯಾನ್ಸ್ ಮಾಡುತ್ತಿದ್ದ ಯುವತಿಗೆ ಹೃದಯಾಘಾತ:  ಕುಸಿದು ಬಿದ್ದ23 ವರ್ಷದ ಯುವತಿ ಸಾವು

ದೇಶದಾದ್ಯಂತ ಪ್ರತಿದಿನ ಹೃದಯಾಘಾತದ ಹಲವು ಪ್ರಕರಣಗಳನ್ನು ನಾವು ಕೇಳುತ್ತೇವೆ. ಯಾರೋ ನೃತ್ಯ ಮಾಡುವಾಗ ಸಾಯುತ್ತಾರೆ, ಯಾರೋ ಕುಳಿತಾಗ ಹೃದಯಾಘಾತಕ್ಕೊಳಗಾಗುತ್ತಾರೆ. ಹೃದಯಾಘಾತದ ಇಂತಹದ್ದೇ ಒಂದು ಪ್ರಕರಣ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಹೃದಯಾಘಾತಕ್ಕೆ ಬಲಿಯಾಗಿರುವ ಈ ಮಹಿಳೆಯ ಹೆಸರು ಪರಿಣಿತ ಜೈನ್. ವಯಸ್ಸು ಇನ್ನೂ 23. MBA ವ್ಯಾಸಂಗ ಮಾಡಿದ್ದ ಪರಿಣಿತ ತನ್ನ ಪೋಷಕರ ಜೊತೆ ಇಂದೋರ್‌ನಲ್ಲಿ ನೆಲೆಸಿದ್ದರು. ಕಳೆದ ಶನಿವಾರ ಪರಿಣಿತ ಜೈನ್ ಅವರು ಸಂಬಂಧಿಕರ ಮದುವೆಯ ಹಿನ್ನೆಲೆಯಲ್ಲಿ ಇಂದೋರ್‌ನಿಂದ ವಿದಿಶಾಗೆ ಪ್ರವಾಸ ಕೈಗೊಂಡಿದ್ದರು.

ಪರಿಣಿತ ಜೈನ್ ಸಂಬಂಧಿಕರ ಅದ್ಧೂರಿ ಮದುವೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಾ ಇತ್ತು. ಈ ಸಂಭ್ರಮಕ್ಕೆ 200ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಮದುವೆ ಮನೆಯ ಸ್ಟೇಜ್ ಮೇಲೆ ಪರಿಣಿತ ಜೈನ್, ಹಿಂದಿಯ ಫೇಮಸ್ ಶರರಾ, ಶರರಾ ಹಾಡಿಗೆ ಒಬ್ಬರೇ ನೃತ್ಯ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ವೇದಿಕೆ ಮೇಲೆ ಕುಸಿದು ಬಿದ್ದರು. ಪರಿಣಿತ ಜೈನ್ ಹಠಾತ್ ಬಿದ್ದಿದ್ದನ್ನು ನೋಡಿದ ಸಂಬಂಧಿಕರ ಗಾಬರಿಯಾಗಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರಿಣಿತ ಅವರನ್ನು ಚೆಕ್ ಮಾಡಿದ ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow