ಡ್ರಗ್ಸ್, ಹುಡುಗಿಯರ ಶೋಕಿ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ!

ಬೆಂಗಳೂರು: ಬೆಂಗಳೂರಿನ ಕೊತ್ತನೂರಿನ ಕೆ.ನಾರಾಯಣಪುರದಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸುನೀಲ್ (28) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ಮಾ.7ರಂದು ತಡರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಯಶವಂತಪುರ ನಿವಾಸಿಯಾಗಿದ್ದ ಸುನೀಲ್ಗೆ ಡ್ರಗ್ಸ್ ಜೊತೆಗೆ ಹುಡುಗಿಯರ ಶೋಕಿ ಕೂಡ ಇತ್ತು. ತನ್ನ ಚಟಕ್ಕಾಗಿ ಮನೆಯಲ್ಲಿಯೇ ಚಿನ್ನ, ಹಣ ಕಳ್ಳತನ ಮಾಡುತ್ತಿದ್ದ. ಇದನ್ನು ಮನೆಯವರು ಪ್ರಶ್ನಿಸಿದರೇ ಸಾಯೋದಾಗಿ ಹೇಳುತ್ತಿದ್ದ.
ನಿಮ್ಮ ಪ್ರತಿಕ್ರಿಯೆ ಏನು?






