ದಾಸವಾಳ ಹೂವಿನ ಚಹಾ ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು ಗೊತ್ತಾ..?

ಫೆಬ್ರವರಿ 5, 2025 - 06:57
 0  9
ದಾಸವಾಳ ಹೂವಿನ ಚಹಾ ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು ಗೊತ್ತಾ..?

 

ದಾಸವಾಳ ಹೂವು ಸಾಕಷ್ಟು ಪೋಷಕಾಂಶ ಸಮೃದ್ಧವಾಗಿದೆ. ಇದರಲ್ಲಿ ಹಲವು ಬಣ್ಣದ, ಹಲವು ವಿಧದ ಹೂವುಗಳಿವೆ. ದಾಸವಾಳ ಬಹುಪಯೋಗಿ ಸಸ್ಯವಾಗಿದೆ. ಇದು ಅನೇಕ ಆರೋಗ್ಯ ಪ್ರಯೋಜನ ನೀಡುತ್ತದೆ. ದಾಸವಾಳವು ದೀರ್ಘಕಾಲಿಕ ಹೂಬಿಡುವ ಸಸ್ಯ. ಅದಲ್ಲದೆ ನೀವು ತುಂಬಾ ಸುಲಭವಾಗಿ ದೇಹದ ತೂಕವನ್ನು ಕಳೆದುಕೊಳ್ಳಬೇಕು ಅಂದರೆ ಅದು ದಾಸವಾಳದ ಚಹಾದಿಂದ ಸಾಧ್ಯ.

 ಹೌದು ದಾಸವಾಳ ಹೂ ಚಹಾವು ನಾವು ಸೇವಿಸುವ ಆಹಾರದಲ್ಲಿನ ಕೊಬ್ಬನ್ನು ಸಣ್ಣ ಕರುಳು ಹೀರಿಕೊಳ್ಳದಂತೆ ತಡೆಯುತ್ತದೆ. ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿಡುತ್ತದೆ. ಹಸಿವು ಕೂಡ ನಿಯಂತ್ರಣದಲ್ಲಿಡುತ್ತದೆ. ಇನ್ಸುಲಿನ್ ಪ್ರತಿರೋಧ ಕಡಿಮೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ತಗ್ಗಿಸುತ್ತದೆ. ಹೃದ್ರೋಗಗಳು ಮತ್ತು ವಯಸ್ಸಾದ ಮೇಲೆ ಚರ್ಮ ಕಳೆಗುಂದುವುದನ್ನು ತಡೆಯುತ್ತದೆ

ದೇಹ ತೂಕ ಇಳಿಕೆ: ಈ ಚಹಾವನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹ ತೂಕ ತ್ವರಿತಗತಿಯಲ್ಲಿ ಇಳಿಕೆಯಾಗುತ್ತದೆ. ಪೋಷಕಾಂಶಗಳು, ಫ್ಲೇವೊನೈಡ್ಗಳು ಮತ್ತು ವಿವಿಧ ಖನಿಜಗಳಿಂದ ಸಮೃದ್ಧವಾಗಿರುವ ದಾಸವಾಳವು ದೇಹದಲ್ಲಿನ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಗಳ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಸಾಕಷ್ಟು ಉತ್ಕರ್ಷಣ ನಿರೋಧಕವಿದ್ದು, ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ದೇಹ ತೂಕ ಇಳಿಕೆಗೆ ದಾಸವಾಳ ಚಹಾ ಉತ್ತಮ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ಇದು ಸಾಕಷ್ಟು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಗಳನ್ನು ಹೊಂದಿದೆ. ಇದು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಹಾಗೆಯೇ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ದಾಸವಾಳ ಹೂವಿನ ಚಹಾ ಸಹಾಯಕ.

ಖಿನ್ನತೆ ಮತ್ತು ಆತಂಕ ನಿವಾರಣೆ: ದಾಸವಾಳವು ಖಿನ್ನತೆ-ವಿರೋಧಿ ಗುಣಗಳನ್ನು ಹೊಂದಿದೆ. ಇದು ಆತಂಕ, ಖಿನ್ನತೆ ಮತ್ತು ಒತ್ತಡದ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ವಾಸ್ತವವಾಗಿ ಇದರಲ್ಲಿರುವ ಫ್ಲೇವನಾಯ್ಡ್ಗಳು ನರಮಂಡಲವನ್ನು ನಿಯಂತ್ರಣದಲ್ಲಿಡುತ್ತವೆ ಮತ್ತು ನಕಾರಾತ್ಮಕ ಚಿಂತನೆಯಂತಹ ರೋಗಲಕ್ಷಣಗಳನ್ನು ನಿವಾರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ದುಃಖಿತರಾಗಿದ್ದರೆ ಒಂದು ಕಪ್ ದಾಸವಾಳದ ಚಹಾವನ್ನು ಕುಡಿದು ನೋಡಿ.

ದಾಸವಾಳದ ಹೂವಿನ ಟೀ ಮಾಡುವ ಅತ್ಯಂತ ಸರಳ ವಿಧಾನ:

* ಮೊದಲು ಒಂದು ಬೌಲ್ ನಲ್ಲಿ 400 ಮಿಲಿಲೀಟರ್ ನೀರು ಹಾಕಿ ಕುದಿಸಿ. ನೀರು ಸ್ವಲ್ಪ ಕುದಿಯುಯುತ್ತಿದ್ದಂತೆ ಒಲೆ ಆರಿಸಿ. ಅದರಲ್ಲಿ ಒಂದು ಚಮಚ ಒಣಗಿದ ಹೂವುಗಳನ್ನು ಸೇರಿಸಿ ಮತ್ತು 5 ನಿಮಿಷಗಳ ಕಾಲ ಮುಚ್ಚಿಡಿ.

* ಒಣಗಿದ ದಾಸವಾಳದ ಹೂವುಗಳ ಸಾರವನ್ನು ಕುದಿಯುವ ನೀರಿಗೆ ಸೇರಿಸಲಾಗುತ್ತದೆ. 5 ನಿಮಿಷಗಳ ನಂತರ ಮುಚ್ಚಳವನ್ನು ತೆಗೆದುಹಾಕಿ ಮತ್ತು ನೀರನ್ನು ಫಿಲ್ಟರ್ ಮಾಡಿ. ಅಷ್ಟೇ, ದಾಸವಾಳ ಹೂವಿನ ಟೀ ರೆಡಿ.

ಈ ಚಹಾವನ್ನು ದಿನಕ್ಕೆ ಮೂರು ಬಾರಿ ಕುಡಿಯಿರಿ. ಕುಡಿಯುವ ಮೊದಲು ಬಿಸಿ ಮಾಡಿ. ಸಕ್ಕರೆ ಸೇರಿಸಬೇಡಿ. ಬಯಸಿದಲ್ಲಿ ಸ್ವಲ್ಪ ಜೇನುತುಪ್ಪ ಅಥವಾ ಶುದ್ಧ ಬೆಲ್ಲವನ್ನು ಸೇರಿಸಬಹುದು. ಅಧಿಕ ತೂಕ ಹೊಂದಿರುವವರು ಊಟಕ್ಕೆ ಅರ್ಧ ಗಂಟೆ ಮೊದಲು ದಾಸವಾಳದ ಟೀ ಕುಡಿದರೆ ತುಂಬಾ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ನೀವು ಕನಿಷ್ಟ ಎರಡು ವಾರಗಳವರೆಗೆ ಈ ವಿಧಾನವನ್ನು ಅನುಸರಿಸಿದರೆ, ನಿಧಾನವಾಗಿ ನೀವು ಫಲಿತಾಂಶಗಳನ್ನು ಪಡೆಯುತ್ತೀರಿ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow