ಪ್ರಜ್ವಲ್ ರೇವಣ್ಣನನ್ನೂ ಮೀರಿಸಿದ ಈ ಕಾಮುಕ! ಇವನ ಮೊಬೈಲ್ʼನಲ್ಲಿದೆ ಲೈಂ*ಗಿಕ ಕ್ರಿಯೆಯ 2500 ವಿಡಿಯೋ!
ಬೆಂಗಳೂರು: ನಗರದಲ್ಲಿ ಮತ್ತೊಂದು ಆಘಾತಕಾರಿ ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಕ್ರಿಕೆಟ್ ಕೋಚ್ ಹಾಗೂ ದೈಹಿಕ ಶಿಕ್ಷಕನಾಗಿರುವ ಮ್ಯಾಥಿವ್ ಎಂಬ ವ್ಯಕ್ತಿಯ ಮೇಲೆ ಸಂತ್ರಸ್ತೆಯೊಬ್ಬಳು ಗಂಭೀರ ಆರೋಪ ಹೊರಿಸಿದ್ದಾರೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾರ್ಮೆಲ್ ಅಕಾಡೆಮಿ ಶಾಲೆಯಲ್ಲಿ ಪಿಟಿ ಟೀಚರ್ ಆಗಿರುವ ಕೇರಳ ಮೂಲದ ಎಬಿವಿ ಮ್ಯಾಥ್ಯೂ, ತನ್ನದೇ ಹೆಸರಿನ ಕ್ರಿಕೆಟ್ ಅಕಾಡೆಮಿಯನ್ನೂ ಹೊಂದಿದ್ದ ಕಾರ್ಮೆಲ್ ಶಾಲೆ ಗೊಟ್ಟಿಗೆರೆ ಸಮೀಪವಿದೆ.
ಹಲವರ ಜೊತೆ ನಗ್ನವಾಗಿ ಪೋಟೊ,ವಿಡಿಯೋವನ್ನೂ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮ್ಯಾಥಿವ್ ತನ್ನನ್ನು ದೈಹಿಕವಾಗಿ ದುರ್ಬಳಕೆ ಮಾಡಿಕೊಂಡು ಖಾಸಗಿ ಕ್ಷಣಗಳನ್ನು ವಿಡಿಯೋಗೆ ಸೆರೆಹಿಡಿದಿದ್ದಾನೆ. ಖಾಸಗಿ ಕ್ಷಣಗಳನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಇದಲ್ಲದೇ, ಇತರ ಹಲವಾರು ಮಹಿಳೆಯರು ಮತ್ತು ಯುವತಿಯರ ಜೊತೆಗಿನ ಖಾಸಗಿ ಕ್ಷಣಗಳನ್ನು ಸಹ ಸೆರೆಹಿಡಿದಿದ್ದಾನೆ ಎಂದು ದೂರಿದ್ದಾಳೆ. ಒಟ್ಟು 2500 ವಿಡಿಯೋಗಳು ಆತನ ಬಳಿಯಿವೆ ಎಂಬ ಆರೋಪವಿದೆ. ಹೊಟ್ಟೆಯಲ್ಲಿ ಒಂದು ಮಗು ಕೊಟ್ಟು ಹೋಗಿದ್ದಾನೆ. ಅದಕ್ಕೆ ಆತನ ಅಪ್ಪನ ಸಪೋರ್ಟ್ ಆಗಿದೆ.
ಒಂದು ತಿಂಗಳ ಹಿಂದೆ ಇಬ್ಬರ ನಡೆಗಳ ಮೇಲೆ ನನಗೆ ಅನುಮಾನ ಬಂದಿತ್ತು. ಆತನ ಮೊಬೈಲ್ನಲ್ಲಿ ಸುಮಾರು 2500ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಇದ್ದವು. ಆತನ ಸರಿ ದಾರಿಗೆ ತರಬೇಕು ಅಂದುಕೊಂಡು ನಾನು ಪ್ರಯತ್ನ ಮಾಡುತ್ತಿದ್ದೆ. ಈಗ ನೋಡಿದ್ರೆ ಆತನೇ ಇಲ್ಲ. ನನಗೆ ಅಪ್ಪ, ಅಮ್ಮ ಯಾರೂ ಇಲ್ಲ. ಅದನ್ನೇ ಆತ ಮಿಸ್ ಯೂಸ್ ಮಾಡಿಕೊಂಡ. ದಯವಿಟ್ಟು ನನಗೆ ಸಹಾಯ ಮಾಡಿ ಅಂತಾ ಕಣ್ಣೀರು ಇಟ್ಟಿದ್ದಾಳೆ.
ನಿಮ್ಮ ಪ್ರತಿಕ್ರಿಯೆ ಏನು?