ದೀಪಾವಳಿ ಹಬ್ಬದಂದೇ ಘೋರ ದುರಂತ: ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಸಾವು
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಯರೆಕಟ್ಟೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತರು ಶ್ರಾವ್ಯಾ (12), ಪುಣ್ಯಾ (12) ಹಾಗೂ ಶ್ರಾವ್ಯಾಳ ತಂದೆ ವೆಂಕಟೇಶ್ (50) ಎಂದು ಗುರುತಿಸಲಾಗಿದೆ.
ಮೂತ್ರ ವಿಸರ್ಜನೆ ವೇಳೆ ಶ್ರಾವ್ಯಾ ಕಾಲು ಜಾರಿ ಕೆರೆಗೆ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ಪುಣ್ಯಾ ನೀರಿಗೆ ಧುಮುಕಿದ್ದಾಳೆ. ಇಬ್ಬರನ್ನೂ ಉಳಿಸಲು ಶ್ರಾವ್ಯಾಳ ತಂದೆ ವೆಂಕಟೇಶ್ ಸಹ ನೀರಿಗೆ ಹಾರಿದ್ದರು.
ಮೂವರಿಗೂ ಈಜು ಬಾರದ ಕಾರಣ ಅವರು ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಘಟನೆ ನಿನ್ನೆ ಸಂಜೆ ಸುಮಾರು ನಾಲ್ಕು ಗಂಟೆ ಮೂವತ್ತರ ವೇಳೆಯಲ್ಲಿ ನಡೆದಿದೆ.ಮೃತದೇಹಗಳನ್ನು ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?