ದೊಡ್ಮನೆ ಸಾಮ್ರಾಜ್ಯಕ್ಕೆ ಎಂಟ್ರಿ ಕೊಟ್ಟ ಯುವರಾಣಿ: ಸ್ಪರ್ಧಿಗಳ ಮಧ್ಯೆ ಜೋರು ಗಲಾಟೆ!

ನವೆಂಬರ್ 27, 2024 - 20:01
 0  9
ದೊಡ್ಮನೆ ಸಾಮ್ರಾಜ್ಯಕ್ಕೆ ಎಂಟ್ರಿ ಕೊಟ್ಟ ಯುವರಾಣಿ: ಸ್ಪರ್ಧಿಗಳ ಮಧ್ಯೆ ಜೋರು ಗಲಾಟೆ!

ಬಿಗ್‌ ಬಾಸ್‌ ಮನೆಯಲ್ಲಿ ಹೊಸ ಅಧಿಕಾರವನ್ನು ಮೋಕ್ಷಿತಾ ಪಡೆದುಕೊಂಡಿದ್ದಾರೆ. ಅವರು ಈಗ ಬಿಗ್‌ ಬಾಸ್‌ ಮನೆಯಲ್ಲಿ ಯುವರಾಣಿ ಪಟ್ಟ ಪಡೆದುಕೊಂಡಿದ್ದಾರೆ. 

ಮೋಕ್ಷಿತಾ ಅವರು ಯುವರಾಣಿ ಆಗುತ್ತಿದ್ದಂತೆ ಸ್ಪರ್ಧಿಗಳ ಮಧ್ಯೆ ಕಿತ್ತಾಟ ನಡೆದಿದೆ. ರಾಜನ ಸಿಂಹಾಸನದ ಅಧಿಕಾರವನ್ನು ಮೊದಲು ಮೋಕ್ಷಿತಾಗೆ ಕೊಟ್ಟಿರಲಿಲ್ಲ. ಅವರಿಗೆಂದೇ ಇನ್ನೊಂದು ಸಿಂಹಾಸನವನ್ನು ಇಡಲಾಗಿತ್ತು. ಮೋಕ್ಷಿತಾ ಈಗ ಆ ಅಧಿಕಾರವನ್ನು ಪಡೆದುಕೊಳ್ಳುತ್ತಿದ್ದಾರೆ. ಯುವರಾಣಿಯಾಗಿ ಭರ್ಜರಿ ರೆಡಿಯಾಗಿ ಬಂದಿದ್ದಾರೆ. ಯುವರಾಣಿ ಬರುವ ಸಂದರ್ಭದಲ್ಲಿ ಉಳಿದವರೆಲ್ಲ ಅವರು ಬರುವ ಹಾದಿಯಲ್ಲಿ ಹೂವು ಚೆಲ್ಲಿದ್ದಾರೆ. ಈಗ ಯುವರಾಣಿ ಹಾಗೂ ರಾಜ ಹೀಗೆ ಎರಡು ತಂಡಗಳಾಗಿ ಮನೆ ಒಡೆಯಬಹುದು.

ಬಿಗ್‌ ಬಾಸ್‌ ಮನೆಯಲ್ಲಿ ದಿನೇ ದಿನೇ ಉಗ್ರಂ ಮಂಜು ಅವರ ಆರ್ಭಟ ಹೆಚ್ಚಾಗಿದೆ. ಇಷ್ಟು ದಿನ ರಾಜ ಮಾತ್ರ ಅಬ್ಬರಿಸುವಂತಾಗಿತ್ತು. ಇದೀಗ ಈಗ ಇವರಿಗೆ ವಿರೋಧಿ ಬಣ ಒಂದು ಹುಟ್ಟಿಕೊಂಡಿದೆ. ಹೌದು, ಮೋಕ್ಷಿತಾ ಪೈ ಅವರು ಯುವರಾಣಿ ಆಗಿದ್ದಾರೆ.

ಸಾಮ್ರಾಜ್ಯಕ್ಕಾಗಿ ಇಬ್ಬರ ಮಧ್ಯೆ ಕಿತ್ತಾಟ ನಡೆದಿದೆ. ಇಡೀ ಮನೆ ಇಬ್ಭಾಗವಾಗಿದೆ. ಈ ಪ್ರೋಮೋನ ಕಲರ್ಸ್ ಕನ್ನಡ ಹಂಚಿಕೊಂಡಿದೆ. ಇದರಲ್ಲಿ ಹನುಮಂತ ಸೇರಿದಂತೆ ಉಗ್ರಂ ಮಂಜು ಅವರು ಸರಿಯಾಗಿ ಕಿತ್ತಾಡಿಕೊಂಡಿದ್ದಾರೆ.

ಹೌದು ಮೋಕ್ಷಿತಾ ಈಗ ಯುವರಾಣಿ ಆಗಿದ್ದಾರೆ. ಒಂದು ಬಣ ಇದ್ದದ್ದು, ಎರಡು ಬಣ ಆಗಿದೆ. ಯುವರಾಣಿ ಕ್ಯಾಪ್ಟನ್‌ ರೂಮ್‌ಗೆ ಎಂಟ್ರಿ ಕೊಡುವಾಗ, ಉಗ್ರಂ ಮಂಜು ಅವರು ತಡೆದಿದ್ದಾರೆ. ಕೂಗಿ ಅಬ್ಬರಿಸಿದ್ದಾರೆ. ಇನ್ನು ಯುವರಾಣಿ ಕೂಡ ಮಾತಿಗೆ ಮಾತು ಕೊಟ್ಟಿದ್ದಾರೆ

ನಿನ್ನೆಯ ಬಿಗ್‌ ಬಾಸ್‌ ಸಂಚಿಕೆಯಲ್ಲಿ ಹಾಡಿನ ಅಬ್ಬರ ಜೋರಾಗಿಯೇ ಇತ್ತು. ವೈಲ್ಡ್ ಕಾರ್ಡ್ ಎಂಟ್ರಿ ರಜತ್ ಕಿಶನ್ ಈ ಹಾಡುಗಳನ್ನ ಬ್ಯಾಕ್ ಟು ಬ್ಯಾಕ್ ಹಾಡಿದ್ದಾರೆ. ಡ್ಯಾನ್ಸ್ ಕೂಡ ಮಾಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow