ದ್ವೇಷದ ಭಾಷಣ ಆರೋಪ: ಶರಣ್ ಪಂಪ್ ವೇಲ್ ವಿರುದ್ಧ ಬಂಧನಕ್ಕೆ ತಡೆ – ಹೈಕೋರ್ಟ್ ಮಹತ್ವದ ಸೂಚನೆ

ಜುಲೈ 10, 2025 - 10:45
ಜುಲೈ 10, 2025 - 11:06
 0  6
ದ್ವೇಷದ ಭಾಷಣ ಆರೋಪ: ಶರಣ್ ಪಂಪ್ ವೇಲ್ ವಿರುದ್ಧ ಬಂಧನಕ್ಕೆ ತಡೆ – ಹೈಕೋರ್ಟ್ ಮಹತ್ವದ ಸೂಚನೆ

ಬೆಂಗಳೂರು: ಹಿಂದೂ ಪರಿಷತ್ ನಾಯಕ ಶರಣ್ ಪಂಪ್ ವೇಲ್ ವಿರುದ್ಧ ಧ್ವೇಷದ ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ದಾಖಲಾದ ಎಫ್ಐಆರ್ ರದ್ದುಪಡಿಸುವ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಶರಣ್ ಅವರನ್ನು ಬಂಧಿಸಬಾರದು ಎಂಬ ತಾತ್ಕಾಲಿಕ ಸೂಚನೆ ನೀಡಿದೆ.

ಸುಹಾಶ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಶರಣ್ ವಿರುದ್ಧ ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್ಐಆರ್ ಅನ್ನು ರದ್ದುಪಡಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಕುರಿತು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಪೀಠ ವಿಚಾರಣೆ ನಡೆಸಿದ್ದು, ಶರಣ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ, ಬಂಧಿಸುವಂತಿಲ್ಲ ಎಂದು ಸ್ಪಷ್ಟ ಸೂಚನೆ ನೀಡಿದೆ.

ಇದೇರೊಂದಿಗೆ, ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಶರಣ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಬಾರದು ಎಂಬ ಸೂಚನೆಯನ್ನು ಕೂಡ ಪೊಲೀಸರು ಮತ್ತು ತನಿಖಾ ಅಧಿಕಾರಿಗಳಿಗೆ ಹೈಕೋರ್ಟ್ ನೀಡಿದೆ. ಉಡುಪಿ ಪೊಲೀಸ್ ಠಾಣಾಧಿಕಾರಿಗೆ ಕುರಿತು ನೋಟಿಸ್ ಜಾರಿಗೊಳಿಸಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow